Posts

Showing posts from October, 2022
ಮೂಡಿದ ಸೂರ್ಯ ಎಂದಿನಂತಿಲ್ಲ.. ಬೀಸುವ ಸುಳಿಗಾಳಿಯಲೂ ತಂಪಿಲ್ಲ ಏಕೋ ಏನೋ ಎದೆ ತುಂಬ  ಮೋಡ ಕವಿದ    ಏನೂ ಅಲ್ಲದವನಾಗುವುದೆಂದರೆ.. ನನ್ನೊಳಗೆ ನಾನೇ ಮಾತಾಗುತ್ತೇನೆ ಮಾತು ಮರೆತು ಮೌನವಾಗುತ್ತೇನೆ ಶೂನ್ಯದೊಳಗಿನ ನಿಟ್ಟುಸಿರಿಗೂ ನಾನು ಬೇಡವಾಗಿರಬೇಕು.. ಏನೂ ಅಲ್ಲದವನಾಗುವುದೆಂದರೆ .. ಏನೂ ಅಲ್ಲದವನಾಗುವುದೆಂದರೆ .. ನಿಜಕ್ಕೂ ನಾನು ಏನೂ ಅಲ್ಲದವನೇ ಇರಬೇಕು  ಬೀಸುವ ತಂಗಾಳಿಗೂ.. ಇದೀಗ ಉದುರಿದ ಹಣ್ಣೆಲೆಗೂ.. ಏನೂ ಅಲ್ಲದವನಾಗಿರಬೇಕು .. ಏನೂ ಅಲ್ಲದವನಾಗಿರಬೇಕು ...      - ಜಾನ್ ಸುಂಟಿಕೊಪ್ಪ 

ಪ್ರಾಣ

ಎಲ್ಲೋ ಕಳೆದುಹೋದಂತಿದೆ ನನ್ನ ಪ್ರಾಣ... ಆತ್ಮದ ಉಳಿವಿಗಾಗಿ ಹಪಹಪಿಸಿ  ನ್ಯಾಯ ನೀತಿ ಗಹಗಹಿಸಿ ಒಳ್ಳೆಯವನಾಗಲು ಬಯಸಿ ಬಯಸಿ ಮತ್ತಷ್ಟು ಕೆಟ್ಟವನಾದೆ... ಇರಲಿ,.. ಅದೆಷ್ಟು ನೋವುಗಳ ಉಂಡಿದ್ದೇನೆ ಕನಸುಗಳ ಕಂಡೂ ಕಂಡೂ ಬರಿದಾಗಿದ್ದೇನೆ ಪ್ರಾಣವಿಲ್ಲದ ಆತ್ಮ  ಆತ್ಮವಿಲ್ಲದ ಪ್ರಾಣ ಊಹಿಸಲಾಗುತ್ತಿಲ್ಲ; ಒಳ್ಳೆಯದಾಗಲಿ... ಪ್ರಾಣವೂ ಆತ್ಮವೂ ಶಾಶ್ವತವೆಂದು ಕಂಡವರಾರು?! ಗಂಟಲು ಬಿಗಿದು  ಕಣ್ಣು ತುಂಬುವುದು ಮಾತ್ರ ಸತ್ಯ ,.. ಅದಿಲ್ಲದಿದ್ದರೆ ಒಂದು ನಿಟ್ಟುಸಿರು... ಹೋಗಿ ಬರುತ್ತೇನೆ... ಛೇ...  ತಪ್ಪಾಯಿತು.. ಬರುವುದಿನ್ನೆಲ್ಲಿಗೆ ಹೊರಡುತ್ತೇನೆ...                        - ಜಾನ್ ಸುಂಟಿಕೊಪ್ಪ