ಮೇಲಿನವರು : ಹಲೋ..ಇವತ್ತಿನ ಪ್ರೋಗ್ರೆಸ್ ಹೇಳಿ;ನಿಮಗೆ ಸಿಕ್ಕಿರೋ ಪಟ್ಟಿಯಲ್ಲಿ ಇವತ್ತು ಎಷ್ಟು ಜನ ಮೂಗಿನಲ್ಲಿ ಉಸಿರಾಡುವವರು? ಕೆಳಗಿನವರು : ಹಲೋ.. xyz ಸರ್... ಮೇಲಿನವರು : ಬಾಯಿಯಲ್ಲಿ ಉಸಿರಾಡುವವರು ಎಷ್ಟು? ಕೆಳಗಿನವರು : pqr ಸರ್... ಮೇಲಿನವರು : ಅದರಲ್ಲಿ ಸತ್ತವರು ಎಷ್ಟು? ಕೆಳಗಿನವರು : ಬಾಯಿಯಲ್ಲಿ ಉಸಿರಾಡುವವರಲ್ಲಾ ಸರ್? ಮೇಲಿನವರು : ಹೌದು.. ಅಲ್ಲ... ಉಸಿರಾಡುವವರಲ್ಲಿ ಸತ್ತವರೆಷ್ಟು? ಕೆಳಗಿನವರು : ಸರ್ ಸತ್ತವರು ಉಸಿರಾಡಕ್ಕಾಗುತ್ತಾ? ಮೇಲಿನವರು : ಸತ್ತವರೆಷ್ಟು ಹೇಳ್ರಿ.. ಕೆಳಗಿನವರು : abc ಸರ್... ಮೇಲಿನವರು : ಸರಿ ನಾಳೆ ಮತ್ತೆ ಕೇಳ್ತೇನೆ... ಕೆಳಗಿನವರು : ಸರ್ ಇನ್ನೊಂದು ಪ್ರೋಗ್ರೆಸ್ ಇದೆ ಸರ್.. ಮೇಲಿನವರು : ಏನು? ಕೆಳಗಿನವರು : ಸರ್ ಉಸಿರಾಡುವವರಲ್ಲಿ ಸತ್ತವರು ಕೆಳಗಿನವರು ಮತ್ತೆ ಸತ್ತವರಲ್ಲಿ ಉಸಿರಾಡುವವರು ಮೇಲಿನವರು.... ಇವರ ಅಂಕಿ ಅಂಶ ನಿಮ್ಮಲ್ಲೇ ಕಚೇರಿಯಲ್ಲಿರುತ್ತೆ ಸರ್...
Posts
ಸಮೀಕ್ಷೆ
- Get link
- X
- Other Apps
ಸಮೀಕ್ಷೆ - 1 ಹೊರಗೆ ಜೋರು ಮಳೆ. ಆ ಜೋರು ಮಳೆಯಲ್ಲೇ ನೆನೆದು ತೊಪ್ಪೆಯಾಗಿ ಬಂದ ಸಮೀಕ್ಷೆ ಬಾಗಿಲ ಬಳಿ ನಿಂತು ಕೆಲಸ ಆರಂಭಿಸಿತು. ಪ್ರಶ್ನೆ : ಅದು ಉಂಟಾ? ಉತ್ತರ : ಇಲ್ಲ ಪ್ರಶ್ನೆ : ಇದು ಉಂಟಾ? ಉತ್ತರ : ಛೇ.. ಏನೂ ಇಲ್ಲ.. ಪ್ರಶ್ನೆ : ಅದು ಎಷ್ಟಿದೆ? ಉತ್ತರ : ಏನಿಲ್ಲ ಪ್ರಶ್ನೆ : ಅದು ಇಲ್ಲವಾ? ಉತ್ತರ : ಎಂಥದೂ ಇಲ್ಲ.. ಪ್ರಶ್ನೆ : ಮತ್ತೆ ಇ... ಉತ್ತರ : ನಿಮಗ್ಯಾಕೆ ಇದೆಲ್ಲಾ? ಏನಿಲ್ಲ, ಏನೂ ಇಲ್ಲ... ಪ್ರಶ್ನಿಸುವವರು : ಸರಿ ಬಿಡಿ..... ನೆನೆದು ತೊಪ್ಪೆಯಾದ ಸಮೀಕ್ಷೆ ಜೋರು ಮಳೆಯಲ್ಲಿ ಮತ್ತೊಂದು ಮನೆಗೆ ಹೊರಡುವಷ್ಟರಲ್ಲಿ ಒಳಗಿನಿಂದ ಉತ್ತರಿಸುವವರು ಹೇಳಿದ್ದು ಸಿಡಿಲಿನಂತೆ ಕೇಳಿಸಿತು.. " ಹೀಗೆ ಹುಚ್ಚುಮಳೆ ಹೊಯ್ದರೆ ಈ ಸಲ ಕರಿಮೆಣಸು ಎಂಟು ಟನ್ ಸಿಗೋದೂ ಡೌಟೇಯಾ.." ನೆನೆದು ತೊಪ್ಪೆಯಾದ ಸಮೀಕ್ಷೆ ಒಂದು ಟನ್ನಿನ ಬೆಲೆ ಇಷ್ಟಾದರೆ ಎಂಟು ಟನ್ನಿನ ಬೆಲೆ ಎಷ್ಟು ಎಂದು ಬಡಬಡಿಸುತ್ತಾ ಬೇರೆ ಮನೆ ಹುಡುಕುತ್ತಾ ಹೋಯಿತು.. ಇದನ್ನೆಲ್ಲಾ ನೋಡುತ್ತಿದ್ದ ಮನೆಯಲ್ಲಿದ್ದ SUV ಕಾರು, ಅದು ಇದು ಮುಂತಾದವೆಲ್ಲಾ ಪಕಪಕನೇ ನಕ್ಕುಬಿಟ್ಟವು... ಸಮೀಕ್ಷೆ - 2 ನೆನೆದು ತೊಪ್ಪೆಯಾದ ಸಮೀಕ್ಷೆ ಅದು ಹೇಗೋ ಕಷ್ಟಪಟ್ಟು ಮನೆ ಹುಡುಕಿ ತಲುಪಿ ಬಿಟ್ಟಿತು. ಗೇಟಿನಿಂದಲೇ ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಏನು ಹೇಳಿದ್ದು ಅಂತಾನೆ ಗೊತ್ತಾಗ್ಲಿಲ್ಲ.. ಆಮೇಲೆ ಮನೆಯವರು ಅದನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳಿದ್ರು. "ಯಾರೋ ಬಂದು ಮ...
ಸಮೀಕ್ಷೆ
- Get link
- X
- Other Apps
ಒಂದು ಸಲ ಗುರುಬ್ರಹ್ಮನಿಗೆ ಸಮೀಕ್ಷೆ ಮಾಡಲು ಕಳಿಸಲಾಯಿತು. ಸಮೀಕ್ಷೆಯನ್ನ ಆನ್ಲೈನ್ನಲ್ಲೇ ಮಾಡಬೇಕು ಅಂತ ಆದೇಶ ಬೇರೆ ಹೊರಡಿಸಲಾಯಿತು.ತುಂಬ ಸುಲಭ ನಾಲ್ಕೇ ದಿನದ ಕೆಲಸ ಅಂತ ಕಿವಿಗೆ ಹೂವನ್ನೂ ಮುಡಿಸಲಾಯಿತು. ಎಲ್ಲಿಗೆ ಹೋಗೋದು? ಹೇಗೆ ಹೋಗೋದು? ಎಂಬ ಗೊಂದಲದ ನಡುವೆ ಸಮೀಕ್ಷೆ ಶುರುವಾಗೇ ಬಿಟ್ಟಿತು. ಪರಬ್ರಹ್ಮ ಅಲ್ಲವಾ ಎಲ್ಲವನ್ನೂ ನಿಭಾಯಿಸುತ್ತಾನೆ ಅಂತ ನಿರುಮ್ಮಳವಾಗಿ ಕುಳಿತವರಿಗೆ server error ಎಂಬ ಹೊಟ್ಟೆನೋವು ಶುರುವಾಗಿ ಅದನ್ನ ಹೇಗೋ ಸರಿಪಡಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಆ ನೋವು ಹೊಟ್ಟೆಯಲ್ಲಿ ಶುರುವಾಗಿ ಎಲ್ಲೆಲ್ಲಿ ವ್ಯಾಪಿಸಿದೆ ಅಂತ ಅರ್ಥ ಮಾಡ್ಕೊಳೋಕೂ ಆಗದೆ ' ಶಿಸ್ತು ಕ್ರಮ' ಮತ್ತೆ 'ನೋಟಿಸು' ಎಂಬ ಇಬ್ಬರನ್ನ ಛೂ ಬಿಡಲಾಯಿತು. ಈ ನಡುವೆ ಪ್ರತಿದಿನ ಸಮೀಕ್ಷೆಗೆ ಹೋಗುತ್ತಿದ್ದ ಪರಬ್ರಹ್ಮನಿಗೆ ಮನೆಮನೆಯಲ್ಲೂ ಎದುರಾಗುತ್ತಿದ್ದವರೆಂದರೆ ' ಏನಿಲ್ಲ ', 'ಏನೂ ಇಲ್ಲ ' 'ಎಂಥದೂ ಇಲ್ಲ'... ಗುರುಬ್ರಹ್ಮ ಶ್ರದ್ದೆಯಿಂದ ಆ ಶಬ್ದಗಳನ್ನ ಆನ್ಲೈನ್ ನಲ್ಲಿ ಹುಡುಕಿ ಹುಡುಕಿ ತುಂಬಿಸಿದ್ದೇ ತುಂಬಿಸಿದ್ದು. ಪರಬ್ರಹ್ಮ ಮನೆಗಳನ್ನ ಹುಡುಕಿ ಹುಡುಕಿ ಹೇಗೋ ತಲುಪಿ ಸಮೀಕ್ಷೆ ಮಾಡಿ ಮನೆಮನೆಗಳಲ್ಲೂ ಉಗಿದು ಉಪ್ಪಾಕಿಸಿಕೊಂಡು ನರಳುತ್ತಿದ್ದರೆ ಒಳಗೊಳಗೇ ನಗುತ್ತಿದ್ದ ಶಿಸ್ತುಕ್ರಮ ಮತ್ತು ನೋಟಿಸು progress ಮತ್ತು active ಎಂಬ ಎರಡು ಹೊಸ ಹುಳಗಳನ್ನ ಪರಬ್ರಹ್ಮನ ತಲೆಯೊಳಗೆ ಇನ...
- Get link
- X
- Other Apps
ಮೂಡಿದ ಸೂರ್ಯ ಎಂದಿನಂತಿಲ್ಲ.. ಬೀಸುವ ಸುಳಿಗಾಳಿಯಲೂ ತಂಪಿಲ್ಲ ಏಕೋ ಏನೋ ಎದೆ ತುಂಬ ಮೋಡ ಕವಿದ ಏನೂ ಅಲ್ಲದವನಾಗುವುದೆಂದರೆ.. ನನ್ನೊಳಗೆ ನಾನೇ ಮಾತಾಗುತ್ತೇನೆ ಮಾತು ಮರೆತು ಮೌನವಾಗುತ್ತೇನೆ ಶೂನ್ಯದೊಳಗಿನ ನಿಟ್ಟುಸಿರಿಗೂ ನಾನು ಬೇಡವಾಗಿರಬೇಕು.. ಏನೂ ಅಲ್ಲದವನಾಗುವುದೆಂದರೆ .. ಏನೂ ಅಲ್ಲದವನಾಗುವುದೆಂದರೆ .. ನಿಜಕ್ಕೂ ನಾನು ಏನೂ ಅಲ್ಲದವನೇ ಇರಬೇಕು ಬೀಸುವ ತಂಗಾಳಿಗೂ.. ಇದೀಗ ಉದುರಿದ ಹಣ್ಣೆಲೆಗೂ.. ಏನೂ ಅಲ್ಲದವನಾಗಿರಬೇಕು .. ಏನೂ ಅಲ್ಲದವನಾಗಿರಬೇಕು ... - ಜಾನ್ ಸುಂಟಿಕೊಪ್ಪ
ಪ್ರಾಣ
- Get link
- X
- Other Apps
ಎಲ್ಲೋ ಕಳೆದುಹೋದಂತಿದೆ ನನ್ನ ಪ್ರಾಣ... ಆತ್ಮದ ಉಳಿವಿಗಾಗಿ ಹಪಹಪಿಸಿ ನ್ಯಾಯ ನೀತಿ ಗಹಗಹಿಸಿ ಒಳ್ಳೆಯವನಾಗಲು ಬಯಸಿ ಬಯಸಿ ಮತ್ತಷ್ಟು ಕೆಟ್ಟವನಾದೆ... ಇರಲಿ,.. ಅದೆಷ್ಟು ನೋವುಗಳ ಉಂಡಿದ್ದೇನೆ ಕನಸುಗಳ ಕಂಡೂ ಕಂಡೂ ಬರಿದಾಗಿದ್ದೇನೆ ಪ್ರಾಣವಿಲ್ಲದ ಆತ್ಮ ಆತ್ಮವಿಲ್ಲದ ಪ್ರಾಣ ಊಹಿಸಲಾಗುತ್ತಿಲ್ಲ; ಒಳ್ಳೆಯದಾಗಲಿ... ಪ್ರಾಣವೂ ಆತ್ಮವೂ ಶಾಶ್ವತವೆಂದು ಕಂಡವರಾರು?! ಗಂಟಲು ಬಿಗಿದು ಕಣ್ಣು ತುಂಬುವುದು ಮಾತ್ರ ಸತ್ಯ ,.. ಅದಿಲ್ಲದಿದ್ದರೆ ಒಂದು ನಿಟ್ಟುಸಿರು... ಹೋಗಿ ಬರುತ್ತೇನೆ... ಛೇ... ತಪ್ಪಾಯಿತು.. ಬರುವುದಿನ್ನೆಲ್ಲಿಗೆ ಹೊರಡುತ್ತೇನೆ... - ಜಾನ್ ಸುಂಟಿಕೊಪ್ಪ
ಹೀಗೊಂದು ಹತ್ಯೆ
- Get link
- X
- Other Apps
ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ನಾನಾಗ ಕುಶಾಲನಗರದ ಕೆ.ಬಿ.ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟವಾಗಿತ್ತು,ಆಗ ಮೊಬೈಲ್ ಇಲ್ಲದ ಕಾರಣ ಫಲಿತಾಂಶ ನೋಡಲು ಕಾಲೇಜಿಗೇ ಹೋಗಬೇಕಿತ್ತು. ನಾನೂ ನನ್ನ ಗೆಳೆಯ ದಿಲೀಪನೂ ಅಂದು ಕಾಲೇಜಿಗೆ ಹೋದೆವು. ಗೆಳೆಯ ಪಾಸಾಗಿದ್ದ ; ಕಾಲೇಜಿನ ಪ್ರಾಂಶುಪಾಲರು ನನ್ನನ್ನು ತಬ್ಬಿ ಮುದ್ದಾಡಿ ಅಭಿನಂದಿಸಿದರು . ಕಾಲೇಜಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಯಸ್ಸು ನನ್ನದಾಗಿತ್ತು. ನನ್ನಮ್ಮಳಿಗೆ ಅಂಕಪಟ್ಟಿ ತೋರಿಸಲೆಂದು ಸಡಗರದಿಂದ ಮನೆಗೆ ಹೊರಟಾಗ ಒಂದು ಘಟನೆ ನಡೆಯಿತು. ಬಸ್ ಸ್ಟ್ಯಾಂಡಿನ ಹಿಂಬದಿ ಮೈದಾನದಲ್ಲಿ ಜನರ ಗುಂಪೊಂದಿತ್ತು. ಯಾರೋ ಒಬ್ಬ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿದ್ದರು. ಆ ಮನುಷ್ಯ ಬಲು ಕೆಟ್ಟದಾಗಿ ಎಲ್ಲರನ್ನೂ ಶಪಿಸುತ್ತಿದ್ದ. ಒಂದಿಬ್ಬರು ಕಲ್ಲೆಸೆಯುತ್ತಿದ್ದರು , ಕೆಲವರು ಜೋರಾಗಿ ನಗುತ್ತಿದ್ದರು. ನನಗೆ ಇದು ಸರಿ ಕಾಣಲಿಲ್ಲ , ಗೆಳೆಯನಿಗೆ ಈ ಮನುಷ್ಯನನ್ನ ಬಿಡಿಸುವ ಅಂದೆ. "ಈ ಹುಚ್ಚ ಯಾರಿಗೆ ಏನು ತೊಂದರೆ ಕೊಟ್ಟಿದ್ದಾನೋ ಗೊತ್ತಿಲ್ಲ , ಬಿಟ್ಟರೆ ಇನ್ನೇನು ಅನಾಹುತವಾಗುತ್ತೋ , ನಡಿ ಹೋಗೋಣ " ಅಂದ. ನನಗೂ ಸರಿಯೆನಿಸಿತು ಅವನ ಮುಖ ನೋಡಲೂ ಭಯವಾಗಿ ಸೀದಾ ಬಸ್ ಸ್ಟ್ಯಾಂಡಿನೊಳಗೆ ನಡೆದೆ. ನಮ್ಮೂರಿಗೆ ಹೋಗುವ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಸೀಟು ಸಿಕ್ಕಿತು . ಇನ್ನೂ ಡ್ರೈವರ್ ಬರುವಷ್ಟರಲ್ಲಿ ಆ ಮಾನಸಿಕ ಅಸ್ವಸ್ಥ ...
ನಿಟ್ಟುಸಿರು
- Get link
- X
- Other Apps
ಭಾರವಾದ ಹೃದಯವೊಂದು ಮೆತ್ತನೆಯ ಭುಜಕ್ಕೆ ಸದ್ದಿಲ್ಲದೆ ಆತುಕೊಂಡಿತು; ನರಳುತ್ತಾ ನರಳುತ್ತಾ ಮುಗುಮ್ಮಾಗಿಸುತ್ತಿದ್ದ ಚಿಂತೆಗಳಿಗೆಲ್ಲಾ ನಿಟ್ಟುಸಿರಿನ ಸಾಂತ್ವಾನ; ಈಗೀಗ ನನಗೆ ತುಂಬಾ ಚಿಂತೆ ತಿರುವಿ ಹಾಕಿದ ಪುಟದಂತೆ ಹಾದುಹೋದ ಹೆಜ್ಜೆಯಂತೆ ಕಂಡೂಕಾಣದಂತಾಗುವ ಕನಸಿನಂತೆ ನಾನು ಆಗುತ್ತಿದ್ದೀನೇನೋ ಎಂಬ ಭಯ; ಹೋಗಲಿ ಬಿಡು.. ಕನಸಿನಲ್ಲಾದರೂ ಕಾಡಿ ಹೋಗುತ್ತೀಯಲ್ಲಾ, ಅದೂ ಇಲ್ಲವಾದರೆ..!? ಛೆ..ಹಾಗೇನಾಗಲಿಕ್ಕಿಲ್ಲ ಕನಸಿಗೇನಿದೆ ಕಟ್ಟುಪಾಡು ನೀರವತೆ ತುಂಬಿದ ಕತ್ತಲಿನಲ್ಲಿ ಬೆಳದಿಂಗಳು ಅರಳಿದಂತೆ, ಇಂದೂ ಬರುವೆ ತಾನೇ...