ಮೂಡಿದ ಸೂರ್ಯ
ಎಂದಿನಂತಿಲ್ಲ..
ಬೀಸುವ ಸುಳಿಗಾಳಿಯಲೂ ತಂಪಿಲ್ಲ
ಏಕೋ ಏನೋ ಎದೆ ತುಂಬ 
ಮೋಡ ಕವಿದ   
ಏನೂ ಅಲ್ಲದವನಾಗುವುದೆಂದರೆ..

ನನ್ನೊಳಗೆ ನಾನೇ ಮಾತಾಗುತ್ತೇನೆ
ಮಾತು ಮರೆತು ಮೌನವಾಗುತ್ತೇನೆ
ಶೂನ್ಯದೊಳಗಿನ ನಿಟ್ಟುಸಿರಿಗೂ
ನಾನು ಬೇಡವಾಗಿರಬೇಕು..
ಏನೂ ಅಲ್ಲದವನಾಗುವುದೆಂದರೆ ..

ಏನೂ ಅಲ್ಲದವನಾಗುವುದೆಂದರೆ ..
ನಿಜಕ್ಕೂ ನಾನು
ಏನೂ ಅಲ್ಲದವನೇ ಇರಬೇಕು 
ಬೀಸುವ ತಂಗಾಳಿಗೂ..
ಇದೀಗ ಉದುರಿದ ಹಣ್ಣೆಲೆಗೂ..
ಏನೂ ಅಲ್ಲದವನಾಗಿರಬೇಕು ..
ಏನೂ ಅಲ್ಲದವನಾಗಿರಬೇಕು ...

     - ಜಾನ್ ಸುಂಟಿಕೊಪ್ಪ 

Comments

Popular posts from this blog

ಸಮೀಕ್ಷೆ

***** ಕವಿತೆಯಾಗುವುದೆಂದರೇನು!?*****