ಸಮೀಕ್ಷೆ

ಒಂದು ಸಲ ಗುರುಬ್ರಹ್ಮನಿಗೆ ಸಮೀಕ್ಷೆ ಮಾಡಲು ಕಳಿಸಲಾಯಿತು. ಸಮೀಕ್ಷೆಯನ್ನ ಆನ್ಲೈನ್ನಲ್ಲೇ ಮಾಡಬೇಕು ಅಂತ ಆದೇಶ ಬೇರೆ ಹೊರಡಿಸಲಾಯಿತು.ತುಂಬ ಸುಲಭ ನಾಲ್ಕೇ ದಿನದ ಕೆಲಸ ಅಂತ ಕಿವಿಗೆ ಹೂವನ್ನೂ ಮುಡಿಸಲಾಯಿತು. 

ಎಲ್ಲಿಗೆ ಹೋಗೋದು? ಹೇಗೆ ಹೋಗೋದು? ಎಂಬ ಗೊಂದಲದ ನಡುವೆ ಸಮೀಕ್ಷೆ ಶುರುವಾಗೇ ಬಿಟ್ಟಿತು. ಪರಬ್ರಹ್ಮ ಅಲ್ಲವಾ ಎಲ್ಲವನ್ನೂ ನಿಭಾಯಿಸುತ್ತಾನೆ ಅಂತ ನಿರುಮ್ಮಳವಾಗಿ ಕುಳಿತವರಿಗೆ server error ಎಂಬ ಹೊಟ್ಟೆನೋವು ಶುರುವಾಗಿ ಅದನ್ನ ಹೇಗೋ ಸರಿಪಡಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಆ ನೋವು ಹೊಟ್ಟೆಯಲ್ಲಿ ಶುರುವಾಗಿ ಎಲ್ಲೆಲ್ಲಿ ವ್ಯಾಪಿಸಿದೆ ಅಂತ ಅರ್ಥ ಮಾಡ್ಕೊಳೋಕೂ ಆಗದೆ ' ಶಿಸ್ತು ಕ್ರಮ' ಮತ್ತೆ 'ನೋಟಿಸು' ಎಂಬ ಇಬ್ಬರನ್ನ ಛೂ ಬಿಡಲಾಯಿತು.  


ಈ ನಡುವೆ ಪ್ರತಿದಿನ ಸಮೀಕ್ಷೆಗೆ ಹೋಗುತ್ತಿದ್ದ ಪರಬ್ರಹ್ಮನಿಗೆ ಮನೆಮನೆಯಲ್ಲೂ ಎದುರಾಗುತ್ತಿದ್ದವರೆಂದರೆ ' ಏನಿಲ್ಲ ', 'ಏನೂ ಇಲ್ಲ ' 'ಎಂಥದೂ ಇಲ್ಲ'... ಗುರುಬ್ರಹ್ಮ ಶ್ರದ್ದೆಯಿಂದ ಆ ಶಬ್ದಗಳನ್ನ ಆನ್ಲೈನ್ ನಲ್ಲಿ ಹುಡುಕಿ ಹುಡುಕಿ ತುಂಬಿಸಿದ್ದೇ ತುಂಬಿಸಿದ್ದು. 

ಪರಬ್ರಹ್ಮ ಮನೆಗಳನ್ನ ಹುಡುಕಿ ಹುಡುಕಿ ಹೇಗೋ ತಲುಪಿ ಸಮೀಕ್ಷೆ ಮಾಡಿ ಮನೆಮನೆಗಳಲ್ಲೂ ಉಗಿದು ಉಪ್ಪಾಕಿಸಿಕೊಂಡು ನರಳುತ್ತಿದ್ದರೆ ಒಳಗೊಳಗೇ ನಗುತ್ತಿದ್ದ ಶಿಸ್ತುಕ್ರಮ ಮತ್ತು ನೋಟಿಸು progress ಮತ್ತು active ಎಂಬ ಎರಡು ಹೊಸ ಹುಳಗಳನ್ನ ಪರಬ್ರಹ್ಮನ ತಲೆಯೊಳಗೆ ಇನ್ನಷ್ಟು ಮತ್ತಷ್ಟು ತುರುಕಲು ಹೆಣಗಾಡುತ್ತಿವೆ..

Comments

Popular posts from this blog

ಸಮೀಕ್ಷೆ

***** ಕವಿತೆಯಾಗುವುದೆಂದರೇನು!?*****