ಮುಗಿದ ಮೇಲೆ
ಕಣ್ಣ ಮುಚ್ಚಿ ಮಲಗಿದೆ
ಭೂತಗಳು ಸರಿದಾಡುತ್ತಿದ್ದವು
ಗಾಬ್ರಿಯಲ್ ಮಾರ್ಕೆಜ್ ನ
ಅಜ್ಜಿ ಹೇಳಿದ ಕತೆಯಂತೆ,
ಮನದ ಅಂಗಳದಲಿ
ಸದ್ದಿಲ್ಲದೆ ಕೋಲ ಕುಣಿಯುತ್ತಿದ್ದವು,..
ಹೌದು ,..
ಈ ಅಪಧಮನಿ - ಅಭಿಧಮನಿ
ಕೋಟಿಗಟ್ಟಲೆ ಲೋಮನಾಳಗಳಲ್ಲೆಲ್ಲಾ
ಅಡಗಿ ಕುಳಿತೆ,
ನನಗೆ ಆ ದೆವ್ವದ ಕಂಗಳ
ನೀರವ ಕತ್ತಲ ಭಯವಿತ್ತು !!
ಈಗ
ಕಣ್ಣು ತೆರೆದಿದ್ದೇನೆ
ಪರಿಚಿತ -ಅಪರಿಚಿತರೆಂಬ
ದೆವ್ವಗಳ ಮುಂದೆಯೇ
ನಾನು ಸರಿದಾಡುತ್ತಿದ್ದೇನೆ-
ಮತ್ತು ನನ್ನ ಕಂಗಳಲೂ
ನೀರವ ಕತ್ತಲಿದೆ,..
- ಜಾನ್ ಸುಂಟಿಕೊಪ್ಪ .
Comments
Post a Comment