ನೇಣು ಕುಣಿಕೆ

ಆ

ನೇಣು ಕುಣಿಕೆ

ಇನ್ನೂ ಹಾಗೆಯೇ ಇದೆ,.,

ತಿರುಗುವ ಫ್ಯಾನಿಗೆ

ಒಂದು ಪೂರ್ಣ ವಿರಾಮವಿಟ್ಟಂತೆ.,,


ಅವರು

ಅವಳನ್ನು ಹೊತ್ತು ಹೋಗಿದ್ದಾರೆ

ಮತ್ತು

ನಾನು ಅವಳೊಂದಿಗೆ ಲೀನವಾಗಿದ್ದೇನೆ ...



ಎಡವಿ ಬಿದ್ದ ಕುರ್ಚಿ

ಜೋತುಬಿದ್ದ ಹಗ್ಗ

ಮತ್ತು

ಆ ಕೋಣೆಯ ನೀರವತೆ

ನನ್ನ ಲೀನವಾಗಿಸಿದೆ .,.

ನಾನು ಲೀನವಾಗಿದ್ದೇನೆ ,,.



ಕೋಣೆಯೊಳಗೆ

ಇಣುಕುವ ಅವರ ಗುಂಡಿಗೆ

ಢವಗುಟ್ಟುತ್ತಿದೆ

ಜತೆಗೆ

ಕಣ್ಣಂಚಲಿ ನೀರು

ಇದ್ದಾಗ ಇಲ್ಲದವರು

ಇಲ್ಲವಾದಾಗ ತಡವರಿಸುತ್ತಾರೆ ,,,

ನನ್ನಂತೆ ,,,


ಆ

ನೇಣು ಕುಣಿಕೆ

ಇನ್ನೂ ಹಾಗೆಯೇ ಇದೆ

ಇರಲಿ ಬಿಡಿ

ಪದೇಪದೇ

ನನಗೂ ಕೊರಳೊಡ್ಡಬೇಕಿದೆ ,,.

Comments

  1. ಇದ್ದಾಗ ಇಲ್ಲದವರು ಇಲ್ಲವಾದಾಗ ತಡವರಿಸುತ್ತಾರೆ.. ವಾಹ್.

    ReplyDelete
  2. ಇದ್ದಾಗ ಇಲ್ಲದವರು ಇಲ್ಲವಾದಾಗ ತಡವರಿಸುತ್ತಾರೆ.. ವಾಹ್.

    ReplyDelete

Post a Comment

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ನೆತ್ತರ ಹನಿಗಳು

ವೈಫಲ್ಯ