ಕೆಂಡದ ಗುಳಿಗೆಗಳು
******1*******
ಭಕ್ತರು
ಒಬ್ಬೊಬ್ಬರಾಗಿ ಬಂದರು
ಮಂಡಿಯೂರಿ ಪಾದರಿಗೆ
ಪಾಪಗಳ
ಪಟ್ಟಿ ಒಪ್ಪಿಸಿದರು-
ಇಗರ್ಜಿ ತುಂಬಾ
ಕೊಳೆತ ವಾಸನೆ,,,
> > ****** 2***** > >
ಶುಭಶುಕ್ರವಾರದ
ಸಂಜೆ ನಾನು
ಮನೆ ಕಡೆ ನಡೆಯುತ್ತಿದ್ದೆ
ನನಗೆ
ಯೇಸುವನ್ನು ಶಿಲುಗೇರಿಸಿದ
ತ್ತೃಪ್ತಿಯಿತ್ತು.,,
> > ***** 3****** > >
ಪಾಸ್ಕ ಹಬ್ಬದ ಭಾನುವಾರ
ಭಕ್ತರೆಲ್ಲರೂ
ಬಾಟಲಿಗೆ ತೀರ್ಥ
ತುಂಬಿಸುತ್ತಿದ್ದರು
ಹಂಡೆಯಲ್ಲಿದ್ದ
ನೀರು ಕೂಗಿತು-
"ಇವರನ್ನು ಶಿಲುಬೆಗೇರಿಸಿ ...
ಇವರನ್ನು ಶಿಲುಬೆಗೇರಿಸಿ ..."
- ಜಾನ್ ಸುಂಟಿಕೊಪ್ಪ
Comments
Post a Comment