ಒಂದು ಹಾಡು
ಅಂತರಂಗ ಹರಿದಿದೆ ಹೇಗೆ ತಾಳಲಿ
ಅಂಧಕಾರ ಕವಿದಿದೆ ಹೇಗೆ ಸಾಗಲಿ
ಹೃದಯ ಚೂರಾಗಿದೆ
ಬದುಕು ಗೋಳಾಗಿದೆ
ಹೇಗೆ ಹೇಳಲಿ.. //2//
ಈ ಜೀವನ
ಸುಳಿಗಾಳಿಗೆ ಚದುರಿದ ಮೋಡ
ಪ್ರತಿ ಹೆಜ್ಜೆಯೂ
ವಿಧಿಯಾಟದ ಕುಹಕದ ನೋಟ
ಹೇಗೆಹೇಗೆ ಅಲೆದರೂ
ದಾರಿಯೇ ಇಲ್ಲ
ಬದುಕೇ ಬೇಡವೆಂದರೂ
ಆಟ ಮುಗಿಯಲ್ಲ // ಅಂತರಂಗ //
ನನ್ನ ಬದುಕು
ಪಾಪವೇ ತುಂಬಿದ ಲೋಟ
ಪ್ರತಿ ಗುಟುಕೂ
ವಿಷವೇ ತುಂಬಿದೆ ಈಗ
ಹೇಗೆ ತಾನೆ ಅರಳಲಿ
ಪ್ರಭೂ ಬಾ ಬೇಗ
ಉಸಿರ ಮಧುರ ಗಾನಕೆ
ಆಗು ನೀ ರಾಗ // ಅಂತರಂಗ //
Comments
Post a Comment