ನೆತ್ತರ ಹನಿಗಳು

ಗುಂಡಿಗೆ ಎದೆಯೊಡ್ಡಲು ತಯಾರಿದ್ದೆ
ಸಿಡಿದ ಗುಂಡಿನದ್ದೇನೂ ನೋವಿಲ್ಲ,
ಬೆನ್ನಿಗೆ ಇರಿದ ಚಾಕು ಮಾತ್ರ
ಪಕಪಕನೆ ನಗುತ್ತಿದೆ,
ನಿಮಗೆ ಗೊತ್ತೇನು -
ಇರಿದವರಿಗೂ ಬೆನ್ನಿರುತ್ತದೆ;

ಬೆಂಕಿಯಲ್ಲಿ ಅರಳುವ ಹೂವು
ನರಳಲು ಹೆದರುವುದಿಲ್ಲ,
ಕೊಳ್ಳಿ ಇಡುವವರೇ
ತಲೆಕೆಡಿಸಿಕೊಳ್ಳಬೇಡಿ
ನನಗಂತೂ ಅಂತ್ಯವಿದೆ
ನಿಮಗೂ ಕೂಡಾ;

ಎಷ್ಟೇ ಬಲಶಾಲಿಯಾದರೂ
ನ್ಯಾಯಕ್ಕೆ ಬೆಲೆ ಇದ್ದೇ ಇದೆ
ಕಣ್ಣು ಕೆಂಪಗಾದರೇನಂತೆ
ಎದೆ ನಡುಕ ತಪ್ಪೀತೇ?

ಸದ್ದಿಲ್ಲದೆ ಏಳುವ ಸೂರ್ಯ
ಸದ್ದು ಮಾಡದೆ ಮುಳುಗಲೇ ಬೇಕು
ಮೂರ್ಖ ,...
ಏಳುವುದು- ಮುಳುಗುವುದು
ಜಗದ ನಿಯಮ;

ನಗುನಗುತ್ತಾ ಮಾತಾಡಿ
ಸ್ನೇಹದ ಬಲೆಬೀಸಿ
ಉಸಿರನ್ನೇ ವಿಷವಾಗಿಸುವವರೇ
ದಯವಿಟ್ಟು ಕ್ಷಮಿಸಿ
ಬೆತ್ತಲೆ ಜಗತ್ತಿದು
ಅಂಗಿ ತೊಟ್ಟಿದ್ದೇ ತಪ್ಪು;

ಸತ್ಯವೂ ಇದೆ
ನ್ಯಾಯವೂ ಇದೆ
ಯಮ ಬಂದರೆ
ಈಗಿಂದೀಗಲೇ ನಾ ತಯಾರು
ನೀವು!?


       - ಜಾನ್ ಸುಂಟಿಕೊಪ್ಪ 

Comments

  1. ಚೆನ್ನಾಗಿದೆ

    ReplyDelete
    Replies
    1. ಬೆನ್ನು ಇದೆ ಅದ್ಭುತ ರೂಪಕ... ಚೆನ್ನಾಗಿದೆ..

      Delete

Post a Comment

Popular posts from this blog

ಸಮೀಕ್ಷೆ

***** ಕವಿತೆಯಾಗುವುದೆಂದರೇನು!?*****