Posts

Showing posts from 2025
ಮೇಲಿನವರು : ಹಲೋ..ಇವತ್ತಿನ ಪ್ರೋಗ್ರೆಸ್ ಹೇಳಿ;ನಿಮಗೆ ಸಿಕ್ಕಿರೋ ಪಟ್ಟಿಯಲ್ಲಿ ಇವತ್ತು ಎಷ್ಟು ಜನ ಮೂಗಿನಲ್ಲಿ ಉಸಿರಾಡುವವರು? ಕೆಳಗಿನವರು : ಹಲೋ.. xyz ಸರ್... ಮೇಲಿನವರು : ಬಾಯಿಯಲ್ಲಿ ಉಸಿರಾಡುವವರು ಎಷ್ಟು? ಕೆಳಗಿನವರು : pqr ಸರ್... ಮೇಲಿನವರು : ಅದರಲ್ಲಿ ಸತ್ತವರು ಎಷ್ಟು?  ಕೆಳಗಿನವರು : ಬಾಯಿಯಲ್ಲಿ ಉಸಿರಾಡುವವರಲ್ಲಾ ಸರ್? ಮೇಲಿನವರು : ಹೌದು.. ಅಲ್ಲ... ಉಸಿರಾಡುವವರಲ್ಲಿ ಸತ್ತವರೆಷ್ಟು? ಕೆಳಗಿನವರು : ಸರ್ ಸತ್ತವರು ಉಸಿರಾಡಕ್ಕಾಗುತ್ತಾ? ಮೇಲಿನವರು : ಸತ್ತವರೆಷ್ಟು ಹೇಳ್ರಿ.. ಕೆಳಗಿನವರು : abc ಸರ್...   ಮೇಲಿನವರು : ಸರಿ ನಾಳೆ ಮತ್ತೆ ಕೇಳ್ತೇನೆ... ಕೆಳಗಿನವರು : ಸರ್ ಇನ್ನೊಂದು ಪ್ರೋಗ್ರೆಸ್ ಇದೆ ಸರ್.. ಮೇಲಿನವರು : ಏನು? ಕೆಳಗಿನವರು : ಸರ್ ಉಸಿರಾಡುವವರಲ್ಲಿ ಸತ್ತವರು ಕೆಳಗಿನವರು ಮತ್ತೆ ಸತ್ತವರಲ್ಲಿ ಉಸಿರಾಡುವವರು ಮೇಲಿನವರು.... ಇವರ ಅಂಕಿ ಅಂಶ ನಿಮ್ಮಲ್ಲೇ ಕಚೇರಿಯಲ್ಲಿರುತ್ತೆ ಸರ್...

ಸಮೀಕ್ಷೆ

ಸಮೀಕ್ಷೆ - 1 ಹೊರಗೆ ಜೋರು ಮಳೆ. ಆ ಜೋರು ಮಳೆಯಲ್ಲೇ ನೆನೆದು ತೊಪ್ಪೆಯಾಗಿ ಬಂದ ಸಮೀಕ್ಷೆ ಬಾಗಿಲ ಬಳಿ ನಿಂತು ಕೆಲಸ ಆರಂಭಿಸಿತು. ಪ್ರಶ್ನೆ : ಅದು ಉಂಟಾ? ಉತ್ತರ : ಇಲ್ಲ  ಪ್ರಶ್ನೆ : ಇದು ಉಂಟಾ? ಉತ್ತರ : ಛೇ.. ಏನೂ ಇಲ್ಲ.. ಪ್ರಶ್ನೆ : ಅದು ಎಷ್ಟಿದೆ? ಉತ್ತರ : ಏನಿಲ್ಲ  ಪ್ರಶ್ನೆ : ಅದು ಇಲ್ಲವಾ? ಉತ್ತರ : ಎಂಥದೂ ಇಲ್ಲ.. ಪ್ರಶ್ನೆ : ಮತ್ತೆ ಇ... ಉತ್ತರ : ನಿಮಗ್ಯಾಕೆ ಇದೆಲ್ಲಾ? ಏನಿಲ್ಲ, ಏನೂ ಇಲ್ಲ... ಪ್ರಶ್ನಿಸುವವರು : ಸರಿ ಬಿಡಿ..... ನೆನೆದು ತೊಪ್ಪೆಯಾದ ಸಮೀಕ್ಷೆ ಜೋರು ಮಳೆಯಲ್ಲಿ ಮತ್ತೊಂದು ಮನೆಗೆ ಹೊರಡುವಷ್ಟರಲ್ಲಿ ಒಳಗಿನಿಂದ ಉತ್ತರಿಸುವವರು ಹೇಳಿದ್ದು ಸಿಡಿಲಿನಂತೆ ಕೇಳಿಸಿತು.. " ಹೀಗೆ ಹುಚ್ಚುಮಳೆ ಹೊಯ್ದರೆ ಈ ಸಲ ಕರಿಮೆಣಸು ಎಂಟು ಟನ್ ಸಿಗೋದೂ ಡೌಟೇಯಾ.." ನೆನೆದು ತೊಪ್ಪೆಯಾದ ಸಮೀಕ್ಷೆ ಒಂದು ಟನ್ನಿನ ಬೆಲೆ ಇಷ್ಟಾದರೆ ಎಂಟು ಟನ್ನಿನ ಬೆಲೆ ಎಷ್ಟು ಎಂದು ಬಡಬಡಿಸುತ್ತಾ ಬೇರೆ ಮನೆ ಹುಡುಕುತ್ತಾ ಹೋಯಿತು.. ಇದನ್ನೆಲ್ಲಾ ನೋಡುತ್ತಿದ್ದ ಮನೆಯಲ್ಲಿದ್ದ SUV ಕಾರು, ಅದು ಇದು ಮುಂತಾದವೆಲ್ಲಾ ಪಕಪಕನೇ ನಕ್ಕುಬಿಟ್ಟವು... ಸಮೀಕ್ಷೆ - 2 ನೆನೆದು ತೊಪ್ಪೆಯಾದ ಸಮೀಕ್ಷೆ ಅದು ಹೇಗೋ ಕಷ್ಟಪಟ್ಟು ಮನೆ ಹುಡುಕಿ ತಲುಪಿ ಬಿಟ್ಟಿತು. ಗೇಟಿನಿಂದಲೇ ಬಾಯಿಗೆ ಬಂದಂತೆ ಬೊಗಳುತ್ತಿದ್ದ ನಾಯಿ ಏನು ಹೇಳಿದ್ದು ಅಂತಾನೆ ಗೊತ್ತಾಗ್ಲಿಲ್ಲ.. ಆಮೇಲೆ ಮನೆಯವರು ಅದನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳಿದ್ರು. "ಯಾರೋ ಬಂದು ಮ...

ಸಮೀಕ್ಷೆ

ಒಂದು ಸಲ ಗುರುಬ್ರಹ್ಮನಿಗೆ ಸಮೀಕ್ಷೆ ಮಾಡಲು ಕಳಿಸಲಾಯಿತು. ಸಮೀಕ್ಷೆಯನ್ನ ಆನ್ಲೈನ್ನಲ್ಲೇ ಮಾಡಬೇಕು ಅಂತ ಆದೇಶ ಬೇರೆ ಹೊರಡಿಸಲಾಯಿತು.ತುಂಬ ಸುಲಭ ನಾಲ್ಕೇ ದಿನದ ಕೆಲಸ ಅಂತ ಕಿವಿಗೆ ಹೂವನ್ನೂ ಮುಡಿಸಲಾಯಿತು.  ಎಲ್ಲಿಗೆ ಹೋಗೋದು? ಹೇಗೆ ಹೋಗೋದು? ಎಂಬ ಗೊಂದಲದ ನಡುವೆ ಸಮೀಕ್ಷೆ ಶುರುವಾಗೇ ಬಿಟ್ಟಿತು. ಪರಬ್ರಹ್ಮ ಅಲ್ಲವಾ ಎಲ್ಲವನ್ನೂ ನಿಭಾಯಿಸುತ್ತಾನೆ ಅಂತ ನಿರುಮ್ಮಳವಾಗಿ ಕುಳಿತವರಿಗೆ server error ಎಂಬ ಹೊಟ್ಟೆನೋವು ಶುರುವಾಗಿ ಅದನ್ನ ಹೇಗೋ ಸರಿಪಡಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಆ ನೋವು ಹೊಟ್ಟೆಯಲ್ಲಿ ಶುರುವಾಗಿ ಎಲ್ಲೆಲ್ಲಿ ವ್ಯಾಪಿಸಿದೆ ಅಂತ ಅರ್ಥ ಮಾಡ್ಕೊಳೋಕೂ ಆಗದೆ ' ಶಿಸ್ತು ಕ್ರಮ' ಮತ್ತೆ 'ನೋಟಿಸು' ಎಂಬ ಇಬ್ಬರನ್ನ ಛೂ ಬಿಡಲಾಯಿತು.   ಈ ನಡುವೆ ಪ್ರತಿದಿನ ಸಮೀಕ್ಷೆಗೆ ಹೋಗುತ್ತಿದ್ದ ಪರಬ್ರಹ್ಮನಿಗೆ ಮನೆಮನೆಯಲ್ಲೂ ಎದುರಾಗುತ್ತಿದ್ದವರೆಂದರೆ ' ಏನಿಲ್ಲ ', 'ಏನೂ ಇಲ್ಲ ' 'ಎಂಥದೂ ಇಲ್ಲ'... ಗುರುಬ್ರಹ್ಮ ಶ್ರದ್ದೆಯಿಂದ ಆ ಶಬ್ದಗಳನ್ನ ಆನ್ಲೈನ್ ನಲ್ಲಿ ಹುಡುಕಿ ಹುಡುಕಿ ತುಂಬಿಸಿದ್ದೇ ತುಂಬಿಸಿದ್ದು.  ಪರಬ್ರಹ್ಮ ಮನೆಗಳನ್ನ ಹುಡುಕಿ ಹುಡುಕಿ ಹೇಗೋ ತಲುಪಿ ಸಮೀಕ್ಷೆ ಮಾಡಿ ಮನೆಮನೆಗಳಲ್ಲೂ ಉಗಿದು ಉಪ್ಪಾಕಿಸಿಕೊಂಡು ನರಳುತ್ತಿದ್ದರೆ ಒಳಗೊಳಗೇ ನಗುತ್ತಿದ್ದ ಶಿಸ್ತುಕ್ರಮ ಮತ್ತು ನೋಟಿಸು progress ಮತ್ತು active ಎಂಬ ಎರಡು ಹೊಸ ಹುಳಗಳನ್ನ ಪರಬ್ರಹ್ಮನ ತಲೆಯೊಳಗೆ ಇನ...