Posts

ಕಡಲ ಹೆಣ

Image
ಇಗೋ ನೋಡಿ ದಡ ಸೇರಿದೆ ಕಡಲ ಹೆಣ! ಅದೆಷ್ಟು ನೀರು ಕುಡಿದಿದೆಯೋ ಕಾಣೆ ಸಾಧ್ಯವಾದಷ್ಟೂ ನೀಲಿಯಾಗಿದೆ ವಿಷಪ್ರಾಶನವಾಗಿರಲಿಕ್ಕೂ ಸಾಕು! ತೊಯ್ದಾಡುವ ಅಲೆಗಳ ಉನ್ಮತ್ತ ಸ್ಖಲನಗಳೂ ಇದೀಗ ಮುಚ್ಚಿಟ್ಟ ಸತ್ಯ! ಮರಣೋತ್ತರ ಪರೀಕ್ಷೆಯ ರಿಪೋರ್ಟು ಇನ್ನು ಬರಬೇಕಷ್ಟೇ... ಒದ್ದೇ ಮರಳಿನ ತುಂಬಾ ಹಾಹಕಾರ- ನಿಟ್ಟುಸಿರುಗಳ ಹೆಜ್ಜೆಗುರುತುಗಳು, ಆವಿಯಾಗುವ ನೀಲಹನಿಗಳ ತುಂಬಾ ಅಗಾಧತೆಯ ನಿಗೂಢ ಕನಸುಗಳು; ಕಡಲಿನ ಒಡಲ ಬೇಗೆಯನೆಲ್ಲಾ ಕಣ್ತುಂಬಿಸಿಕೊಂಡ ನಾಯಿಗೂ ಆ ಸಿಂದಾಬಾದಿನದೇ ಚಿಂತೆ; ಒಂದೇ ಒಂದು ಉಬ್ಬರವಿಳಿತ ಸಾಕು ಕಡಲ ಹೆಣವ ಹೂವಾಗಿಸಲು ಗರಿಗೆದರುವ ಬಲೆಗಳ ಹಸಿರಾಗಿಸಲು ಹೊಟ್ಟೆ ಚುರುಗುಟ್ಟುವ ಹರಕಲು ಚಡ್ಡಿಯವನ ಮುಖವರಳಿಸಲು... ಬಾ ಕಡಲೇ ಬಾ... ಈ ಬರಗೆಟ್ಟ ಕಿನಾರೆಗಳ ಇಲ್ಲವಾಗಿಸು ಈ ಕಡಲ ಹೆಣವ ನೋಹನ ನಾವೆಯಾಗಿಸು - ಜಾನ್ ಸುಂಟಿಕೊಪ್ಪ. (ನೋಹ ಬೈಬಲಿನ ಒಬ್ಬ ಪುಣ್ಯ ಪುರುಷ ,ಜಲಪ್ರಳಯ ಬಂದಾಗ ದೇವರ ಆಜ್ನಾನುಸಾರ ಒಂದು ನಾವೆಯನ್ನು ಕಟ್ಟಿ  ಸಕಲ ಜೀವಜಂತುಗಳಲ್ಲಿ ಒಂದೊಂದು ಜತೆಯನ್ನು ಕಾಪಾಡಿದವ.)

ಹಾವು,ಹಕ್ಕಿ ಮತ್ತು ಅಕ್ಕ

> > > ಹೊಸ ವರುಷದ ದಿನ > > > ಮನೆಗೆ ಅಕ್ಕ ಬಂದಾಗಿತ್ತು > > ಸೂಟುಕೇಸಿನೊಂದಿಗೇ...! > > > * * * * * * > > > ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು > > ಸವರುತ್ತಾ ಹತ್ತಿದ ಹಾವು > > ಪೊರೆ ಕಳಚುತ್ತಿತ್ತು... > > ಧಾವಂತದಿಂದ ನಾನು ಓಡಿದ್ದೇ ಓಡಿದ್ದು, > > ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು, > > ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ- > > 'ದೂರ ಹೋಗೋ..ಮುಟ್ಟಬ್ಯಾಡ,,,' > > ಅಕ್ಕ ಅರಚಿದಳು, > > ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ! > > > > * * * * * > > > > ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ, > > ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ, > > ಇಬ್ಬರದೂ ಎಂತಹ ಸಂಧಾನವೋ ಕಾಣೆ > > ಅಕ್ಕ ತೆರೆದ ಬಾಗಿಲಲೇ > > ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು > > > * * * * * * > > > > ನೆತ್ತಿಗೇರಿದ ಪಿತ್ತದೊಂದಿಗೇ > > ಅಕ್ಕಳ ಹುಡುಕಿದೆ > > ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು, > > 'ಹಕ್ಕಿಯಂತೆ ಹಾರುವುದು ಹೇಗೆ!? > > > > > > > ಕೊಂ...

ಭಯ

ನೀರಿಗೆ ಎಸೆದ ಚಪ್ಪಟೆ ಕಲ್ಲು ಅವಸರವಸರವಾಗಿ ಕೊಳದ ಗಡಿ ದಾಟಿದ್ದು ಕಂಡು ಹೃದಯ ಕಸಕ್ಕೆಂದಿತು ! ಪಕ್ಕದ ಮನೆಯ ಹಸುಗೂಸು ಒಂದೇ ಸಮನೆ ಅಳುತ್ತಿದೆ; ಜಗತ್ತಿನ ಕೊಳದಲ್ಲಿ ಇನ್ನೊಂದು ಕಲ್ಲು ಇಳಿದು ಬರುವುದ ಚಿಂತಿಸಿಯೇ ಹೃದಯ ಮೊಣಕಾಲೂರಿತು. ಕೊಳದಲ್ಲಿ ಎದ್ದು ನಿಂತ ಅಲೆಗಳ ಮೇಲೆ ಇದೀಗ ಸೂರ್ಯನ ಕಿರಣಗಳ 'ಜಮಾಅತ್' ಆರಂಭವಾಗಿದೆ. ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ. ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ.

***** ಮತ್ತೆ ಮತ್ತೆ ಸಮ್ಮಿಲನ *****

ಸರಕಾರಿ ಶಾಲೆಯೆಂದರೆ ಅದೊಂದು ವಿಭಿನ್ನ ಜಗತ್ತು.ಸಿಂಬಳ ಜಾರುವ ಮೂಗು,ಧೂಳು ಮೆತ್ತಿದ ಚಡ್ಡಿ,ಕಣ್ಣ ಆಳದಿಂದೆಲ್ಲೋ ಸದ್ದಿಲ್ಲದೇ ಕೇಳುವ ಅಸಹಾಯ ಆಕ್ರಂದನ,ಛಿಲ್ಲೆನ್ನುವ ಕಣ್ಣೀರು,ಅಪ್ಪ ಯಾರೋ!?ಅಮ್ಮ ಯಾರೋ?! ಅಜ್ಜ-ಅಜ್ಜಿಯರನ್ನೇ ಸರ್ವಸ್ವವೆಂದರಿತ ಪುಟ್ಟ ಹೃದಯ,ಓಡಿ ಹೋದ ಅಮ್ಮನನ್ನೇ ಸದಾ ಹುಡುಕುವ ಕಂಗಳು,,ಗಪ್ಪೆನ್ನುವ ಹೆಂಡ-ಬೀಡಿಯ ವಾಸನೆಯನ್ನು ರಕ್ತಗತವಾಗಿಸಿಕೊಂಡು ನಿರ್ಲಿಪ್ತರಾದ ಎಳೆಯ ಜೀವಗಳು.. ಕಣ್ಣ ಮುಂದೆಯೇ ನಡೆವ ಮಬ್ಬುಗತ್ತಲ ತೂರಾಟಕ್ಕೆ,ಬಡಿದಾಟಕ್ಕೆ,ಕೊಸರಾಟಕ್ಕೆ ಮೂಕಸಾಕ್ಷಿಗಳು,ಚಪ್ಪಲಿಯಿಲ್ಲದ ಕಾಲಿನಲ್ಲೇ ಕುಂಟುಬಿಲ್ಲೆ ,ಜೂಟಾಟ ಆಡಿ ಜಗತ್ತು ಗೆಲ್ಲುವ ಛಲದ ಮಲ್ಲರು,ಕರುಳು ಕಿತ್ತು ತಿನ್ನುವ ಹೊಟ್ಟೆ ಹಸಿವಿದ್ದರೂ ಚೀಪಿ ಚೀಪಿ ಕುಡಿವ ಜಿಗಣೆಗಳಿಗೆ ಉದಾರವಾಗಿ ನೆತ್ತರು ದಾನ ಮಾಡುವ ಅಮಾಯಕರು,.. ಈ ನೋವಿನ-ಹಸಿವಿನ ನಡುವೆಯೂ ಬಾಯಿ ತುಂಬಾ ಗಲಗಲ ನಕ್ಕು ಪಾಠ ಕೇಳುವ ಹೃದಯವಂತ ಜ್ನಾನದ ಕಂದಮ್ಮಗಳು,,,,, ಇದು ಮುಗಿಯೋಲ್ಲ ಕಣ್ರೀ,,,, ಸರ್ಕಾರಿ ಶಾಲೆಗಳನ್ನು,ಅವುಗಳ ಕಾರ್ಯ ವೈಖರಿಯನ್ನು ಉಡಾಫೆಯಿಂದ ಕಾಣುವ ತಣ್ಣಗಿನ ರಕ್ತದ ಪ್ರಾಣಿಗಳನ್ನು ಕಂಡಾಗೆಲ್ಲಾ ಬೇಸರವಾಗುತ್ತದೆ. ಆದ್ರೆ ಬಹಳಷ್ಟು ಜನರಿದ್ದಾರೆ , ಸುಮ್ಮಗೇ ಕೂತುಬಿಟ್ಟ ಆ ನಾಲ್ಕುನಾಡು ಅರಮನೆಯನ್ನೂ, ಸದಾ ಹಸಿರು ಹೊದ್ದು ತೂಕಡಿಸುವ ತಡಿಯಂಡಮೋಳನ್ನೂ ಕಣ್ತುಂಬಿಸಲು ಬಂದವರು ಒಮ್ಮೆ ಇಣುಕಿ ನೋಡಿ "ಓ,. ಇಲ್ಲೇನೋ ನಡಿತಿದೆ ,,,,,"ಎಂದು ಕೈ ಬೀಸುತ್ತಾರ...

*** ಹೊತ್ತು ***

ಹೊತ್ತು ಮುಳುಗುತ್ತದೆ ಮತ್ತು ನಾನೂ.... ನಿರೀಕ್ಷೆಗಳಿಲ್ಲದ ಆಳಕ್ಕೆ ಕುಸಿಯುತ್ತಿರುವೆ,... ಈ ಆಯಾಸ- ಕಣ್ಣಪೊರೆಯ ಮಂಕು ಎಚ್ಚರಿಸುತ್ತದೆ, ತಟ್ಟಿ ತಟ್ಟಿ ಎಬ್ಬಿಸುತ್ತದೆ., ಬಹುಶಃ..... ಹೊತ್ತು ಮುಳುಗಿದ ನಂತರ ಹೊಸ ಬದುಕಿದೆ... ಹೊಸ ಬದುಕಿದೆ... - ಜಾನ್ ಸುಂಟಿಕೊಪ್ಪ.

***** ವೃಣ *****

ನನ್ನೊಳಗಿನ ವೃಣದ ನೋವೆಲ್ಲಾ ಹಾಡಾಗಿ ಹೊರಹೊಮ್ಮಿದೆ; ಆ ಹಾಡು ವಿಷಾದವಾಗಿ ರಾಗ ಮೀರಿ ಗೋಡೆಗೋಡೆಗಳಲೂ ಸೂತಕ, ಕಿಟಕಿ ಬಾಗಿಲುಗಳ ತುಂಬಾ ಅನುಕಂಪ; ನನ್ನೊಳಗಿನ ವೃಣದ ತುಂಬಾ ಸಾವು-ಬದುಕಿನ ಚರ್ಚೆ,,, ದೇಹ ತುಂಬಾ ನೋವಂತೆ ಆತ್ಮಕ್ಕೆಲ್ಲಿದೆ ಚಿಂತೆ,,,, ಇದೀಗ,,, ನಾನು ಆತ್ಮವೆಂದು ಅರಿತು ವೃಣಗಳನ್ನೆಲ್ಲಾ ಹಣತೆಯಾಗಿಸುತ್ತಿದ್ದೇನೆ, ಆ ಹಣತೆಯಿಂದೊಮ್ಮುವ ಕಾಂತಿ ಕಿಟಕಿ ಬಾಗಿಲುಗಳ ಸಂತೈಸಬೇಕಿದೆ,,,, ಬದುಕನ್ನು ಬೆಳಗಿಸಬೇಕಿದೆ,,,.. - ಜಾನ್ ಸುಂಟಿಕೊಪ್ಪ.

***** ಕವಿತೆಯಾಗುವುದೆಂದರೇನು!?*****

ಕವಿತೆಯಾಗುವುದೆಂದರೇನು!? ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ ಬೀದಿ ನಾಯಿಗೆ ಲೈಟುಗಂಬವೊಂದು ಕೇಳಿತು,... ಕತ್ತಲೊಳಗಿನ ಬೆಳಕನ್ನು ಬೆಳಕಿನೊಳಗಿನ ಕತ್ತಲನ್ನೂ ಕಂಡು ಊಳಿಡುವುದೇ ಕವಿತೆಯೆಂದಿತು ನಾಯಿ ಲೈಟುಗಂಬಕ್ಕೂ ನಿಜವೆನ್ನಿಸಿತೇನೋ,,, ಅಷ್ಟಕ್ಕೇ ಕರೆಂಟು ಹೋಗಿ ಕತ್ತಲಿಗೂ ಬೆಳಕಿಗೂ ಕಾದಾಟವಾಗಿ ಬೀದಿಯುದ್ದಕ್ಕೂ ಊಳಿಡುವಿಕೆ ಕವಿತೆಯಾಯಿತು,,... ಕವಿತೆಯಾಗುವುದೆಂದರೇನು!? ಪರಪರ ಕೆರೆದುಕೊಳ್ಳುತ್ತಾ ಕಾಲನೆಳೆದು ನಡೆಯುತ್ತಿದ್ದ ಹುಚ್ಚನಿಗೆ ರಸ್ತೆಯೊಂದು ಕೇಳಿತು,,, ಮಾತಿನೊಳಗಿನ ಅರ್ಥವನ್ನು ಅರ್ಥದೊಳಗಿನ ಮಾತನ್ನೂ ಕಂಡು ಗಲಗಲ ನಕ್ಕು ಅಳುವುದೇ ಕವಿತೆಯೆಂದ ರಸ್ತೆಗೂ ನಿಜವೆನ್ನಿಸಿತೇನೋ... ಅಷ್ಟಕ್ಕೇ 'ಅದು-ಇದು' ತಿನ್ನುವವರ ನಡುವೆ ಗಲಭೆಯಾಗಿ ಮಾತಿಗೂ ಅರ್ಥಕ್ಕೂ ಕಾದಾಟವಾಗಿ ರಸ್ತೆಯುದ್ದಕ್ಕೂ ನಗು-ಅಳು ಕವಿತೆಯಾಯಿತು,,., ಇದೀಗ,... ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ ಕವಿತೆಯ ಕೊಲೆಯಾಗಿದೆ,,,, - ಜಾನ್ ಸುಂಟಿಕೊಪ್ಪ.