Posts

Showing posts from June, 2016

***** ಮತ್ತೆ ಮತ್ತೆ ಸಮ್ಮಿಲನ *****

ಸರಕಾರಿ ಶಾಲೆಯೆಂದರೆ ಅದೊಂದು ವಿಭಿನ್ನ ಜಗತ್ತು.ಸಿಂಬಳ ಜಾರುವ ಮೂಗು,ಧೂಳು ಮೆತ್ತಿದ ಚಡ್ಡಿ,ಕಣ್ಣ ಆಳದಿಂದೆಲ್ಲೋ ಸದ್ದಿಲ್ಲದೇ ಕೇಳುವ ಅಸಹಾಯ ಆಕ್ರಂದನ,ಛಿಲ್ಲೆನ್ನುವ ಕಣ್ಣೀರು,ಅಪ್ಪ ಯಾರೋ!?ಅಮ್ಮ ಯಾರೋ?! ಅಜ್ಜ-ಅಜ್ಜಿಯರನ್ನೇ ಸರ್ವಸ್ವವೆಂದರಿತ ಪುಟ್ಟ ಹೃದಯ,ಓಡಿ ಹೋದ ಅಮ್ಮನನ್ನೇ ಸದಾ ಹುಡುಕುವ ಕಂಗಳು,,ಗಪ್ಪೆನ್ನುವ ಹೆಂಡ-ಬೀಡಿಯ ವಾಸನೆಯನ್ನು ರಕ್ತಗತವಾಗಿಸಿಕೊಂಡು ನಿರ್ಲಿಪ್ತರಾದ ಎಳೆಯ ಜೀವಗಳು.. ಕಣ್ಣ ಮುಂದೆಯೇ ನಡೆವ ಮಬ್ಬುಗತ್ತಲ ತೂರಾಟಕ್ಕೆ,ಬಡಿದಾಟಕ್ಕೆ,ಕೊಸರಾಟಕ್ಕೆ ಮೂಕಸಾಕ್ಷಿಗಳು,ಚಪ್ಪಲಿಯಿಲ್ಲದ ಕಾಲಿನಲ್ಲೇ ಕುಂಟುಬಿಲ್ಲೆ ,ಜೂಟಾಟ ಆಡಿ ಜಗತ್ತು ಗೆಲ್ಲುವ ಛಲದ ಮಲ್ಲರು,ಕರುಳು ಕಿತ್ತು ತಿನ್ನುವ ಹೊಟ್ಟೆ ಹಸಿವಿದ್ದರೂ ಚೀಪಿ ಚೀಪಿ ಕುಡಿವ ಜಿಗಣೆಗಳಿಗೆ ಉದಾರವಾಗಿ ನೆತ್ತರು ದಾನ ಮಾಡುವ ಅಮಾಯಕರು,.. ಈ ನೋವಿನ-ಹಸಿವಿನ ನಡುವೆಯೂ ಬಾಯಿ ತುಂಬಾ ಗಲಗಲ ನಕ್ಕು ಪಾಠ ಕೇಳುವ ಹೃದಯವಂತ ಜ್ನಾನದ ಕಂದಮ್ಮಗಳು,,,,, ಇದು ಮುಗಿಯೋಲ್ಲ ಕಣ್ರೀ,,,, ಸರ್ಕಾರಿ ಶಾಲೆಗಳನ್ನು,ಅವುಗಳ ಕಾರ್ಯ ವೈಖರಿಯನ್ನು ಉಡಾಫೆಯಿಂದ ಕಾಣುವ ತಣ್ಣಗಿನ ರಕ್ತದ ಪ್ರಾಣಿಗಳನ್ನು ಕಂಡಾಗೆಲ್ಲಾ ಬೇಸರವಾಗುತ್ತದೆ. ಆದ್ರೆ ಬಹಳಷ್ಟು ಜನರಿದ್ದಾರೆ , ಸುಮ್ಮಗೇ ಕೂತುಬಿಟ್ಟ ಆ ನಾಲ್ಕುನಾಡು ಅರಮನೆಯನ್ನೂ, ಸದಾ ಹಸಿರು ಹೊದ್ದು ತೂಕಡಿಸುವ ತಡಿಯಂಡಮೋಳನ್ನೂ ಕಣ್ತುಂಬಿಸಲು ಬಂದವರು ಒಮ್ಮೆ ಇಣುಕಿ ನೋಡಿ "ಓ,. ಇಲ್ಲೇನೋ ನಡಿತಿದೆ ,,,,,"ಎಂದು ಕೈ ಬೀಸುತ್ತಾರ