Posts

ಏನೂ ಅಲ್ಲದವನಾಗುವುದೆಂದರೆ ..

ಮೂಡಿದ ಸೂರ್ಯ ಎಂದಿನಂತಿಲ್ಲ.. ಬೀಸುವ ಸುಳಿಗಾಳಿಯಲೂ ತಂಪಿಲ್ಲ ಏಕೋ ಏನೋ ಎದೆ ತುಂಬ  ಮೋಡ ಕವಿದ ವಾತಾವರಣ  ಏನೂ ಅಲ್ಲದವನಾಗುವುದೆಂದರೆ.. ನನ್ನೊಳಗೆ ನಾನೇ ಮಾತಾಗುತ್ತೇನೆ ಮಾತು ಮರೆತು ಮೌನವಾಗುತ್ತೇನೆ ಶೂನ್ಯದೊಳಗಿನ ನಿಟ್ಟುಸಿರಿಗೂ ನಾನು ಬೇಡವಾಗಿರಬೇಕು.. ಏನೂ ಅಲ್ಲದವನಾಗುವುದೆಂದರೆ .. ಏನೂ ಅಲ್ಲದವನಾಗುವುದೆಂದರೆ .. ನಿಜಕ್ಕೂ ನಾನು ಏನೂ ಅಲ್ಲದವನೇ ಇರಬೇಕು  ಬೀಸುವ ತಂಗಾಳಿಗೂ.. ಇದೀಗ ಉದುರಿದ ಹಣ್ಣೆಲೆಗೂ.. ಏನೂ ಅಲ್ಲದವನಾಗಿರಬೇಕು .. ಏನೂ ಅಲ್ಲದವನಾಗಿರಬೇಕು ...      - ಜಾನ್ ಸುಂಟಿಕೊಪ್ಪ 

ಪ್ರಾಣ

ಎಲ್ಲೋ ಕಳೆದುಹೋದಂತಿದೆ ನನ್ನ ಪ್ರಾಣ... ಆತ್ಮದ ಉಳಿವಿಗಾಗಿ ಹಪಹಪಿಸಿ  ನ್ಯಾಯ ನೀತಿ ಗಹಗಹಿಸಿ ಒಳ್ಳೆಯವನಾಗಲು ಬಯಸಿ ಬಯಸಿ ಮತ್ತಷ್ಟು ಕೆಟ್ಟವನಾದೆ... ಇರಲಿ,.. ಅದೆಷ್ಟು ನೋವುಗಳ ಉಂಡಿದ್ದೇನೆ ಕನಸುಗಳ ಕಂಡೂ ಕಂಡೂ ಬರಿದಾಗಿದ್ದೇನೆ ಪ್ರಾಣವಿಲ್ಲದ ಆತ್ಮ  ಆತ್ಮವಿಲ್ಲದ ಪ್ರಾಣ ಊಹಿಸಲಾಗುತ್ತಿಲ್ಲ; ಒಳ್ಳೆಯದಾಗಲಿ... ಪ್ರಾಣವೂ ಆತ್ಮವೂ ಶಾಶ್ವತವೆಂದು ಕಂಡವರಾರು?! ಗಂಟಲು ಬಿಗಿದು  ಕಣ್ಣು ತುಂಬುವುದು ಮಾತ್ರ ಸತ್ಯ ,.. ಅದಿಲ್ಲದಿದ್ದರೆ ಒಂದು ನಿಟ್ಟುಸಿರು... ಹೋಗಿ ಬರುತ್ತೇನೆ... ಛೇ...  ತಪ್ಪಾಯಿತು.. ಬರುವುದಿನ್ನೆಲ್ಲಿಗೆ ಹೊರಡುತ್ತೇನೆ...                        - ಜಾನ್ ಸುಂಟಿಕೊಪ್ಪ

ಹೀಗೊಂದು ಹತ್ಯೆ

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ನಾನಾಗ ಕುಶಾಲನಗರದ ಕೆ.ಬಿ.ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟವಾಗಿತ್ತು,ಆಗ ಮೊಬೈಲ್ ಇಲ್ಲದ ಕಾರಣ ಫಲಿತಾಂಶ ನೋಡಲು ಕಾಲೇಜಿಗೇ ಹೋಗಬೇಕಿತ್ತು.  ನಾನೂ ನನ್ನ ಗೆಳೆಯ ದಿಲೀಪನೂ ಅಂದು ಕಾಲೇಜಿಗೆ ಹೋದೆವು. ಗೆಳೆಯ ಪಾಸಾಗಿದ್ದ ; ಕಾಲೇಜಿನ ಪ್ರಾಂಶುಪಾಲರು ನನ್ನನ್ನು ತಬ್ಬಿ ಮುದ್ದಾಡಿ ಅಭಿನಂದಿಸಿದರು . ಕಾಲೇಜಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಯಸ್ಸು  ನನ್ನದಾಗಿತ್ತು. ನನ್ನಮ್ಮಳಿಗೆ ಅಂಕಪಟ್ಟಿ ತೋರಿಸಲೆಂದು ಸಡಗರದಿಂದ ಮನೆಗೆ ಹೊರಟಾಗ ಒಂದು ಘಟನೆ ನಡೆಯಿತು. ಬಸ್ ಸ್ಟ್ಯಾಂಡಿನ ಹಿಂಬದಿ ಮೈದಾನದಲ್ಲಿ ಜನರ ಗುಂಪೊಂದಿತ್ತು. ಯಾರೋ ಒಬ್ಬ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿದ್ದರು. ಆ ಮನುಷ್ಯ ಬಲು ಕೆಟ್ಟದಾಗಿ ಎಲ್ಲರನ್ನೂ ಶಪಿಸುತ್ತಿದ್ದ. ಒಂದಿಬ್ಬರು ಕಲ್ಲೆಸೆಯುತ್ತಿದ್ದರು , ಕೆಲವರು ಜೋರಾಗಿ ನಗುತ್ತಿದ್ದರು. ನನಗೆ ಇದು ಸರಿ ಕಾಣಲಿಲ್ಲ , ಗೆಳೆಯನಿಗೆ ಈ ಮನುಷ್ಯನನ್ನ ಬಿಡಿಸುವ ಅಂದೆ. "ಈ ಹುಚ್ಚ ಯಾರಿಗೆ ಏನು ತೊಂದರೆ ಕೊಟ್ಟಿದ್ದಾನೋ ಗೊತ್ತಿಲ್ಲ , ಬಿಟ್ಟರೆ ಇನ್ನೇನು ಅನಾಹುತವಾಗುತ್ತೋ , ನಡಿ ಹೋಗೋಣ " ಅಂದ. ನನಗೂ ಸರಿಯೆನಿಸಿತು ಅವನ ಮುಖ ನೋಡಲೂ ಭಯವಾಗಿ ಸೀದಾ ಬಸ್ ಸ್ಟ್ಯಾಂಡಿನೊಳಗೆ ನಡೆದೆ. ನಮ್ಮೂರಿಗೆ ಹೋಗುವ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಸೀಟು ಸಿಕ್ಕಿತು . ಇನ್ನೂ ಡ್ರೈವರ್ ಬರುವಷ್ಟರಲ್ಲಿ ಆ ಮಾನಸಿಕ ಅಸ್ವಸ್ಥ

ನಿಟ್ಟುಸಿರು

ಭಾರವಾದ ಹೃದಯವೊಂದು ಮೆತ್ತನೆಯ ಭುಜಕ್ಕೆ  ಸದ್ದಿಲ್ಲದೆ ಆತುಕೊಂಡಿತು; ನರಳುತ್ತಾ ನರಳುತ್ತಾ ಮುಗುಮ್ಮಾಗಿಸುತ್ತಿದ್ದ ಚಿಂತೆಗಳಿಗೆಲ್ಲಾ ನಿಟ್ಟುಸಿರಿನ ಸಾಂತ್ವಾನ; ಈಗೀಗ ನನಗೆ ತುಂಬಾ ಚಿಂತೆ ತಿರುವಿ ಹಾಕಿದ ಪುಟದಂತೆ ಹಾದುಹೋದ ಹೆಜ್ಜೆಯಂತೆ ಕಂಡೂಕಾಣದಂತಾಗುವ ಕನಸಿನಂತೆ ನಾನು ಆಗುತ್ತಿದ್ದೀನೇನೋ ಎಂಬ ಭಯ; ಹೋಗಲಿ ಬಿಡು.. ಕನಸಿನಲ್ಲಾದರೂ ಕಾಡಿ ಹೋಗುತ್ತೀಯಲ್ಲಾ, ಅದೂ ಇಲ್ಲವಾದರೆ..!? ಛೆ..ಹಾಗೇನಾಗಲಿಕ್ಕಿಲ್ಲ ಕನಸಿಗೇನಿದೆ ಕಟ್ಟುಪಾಡು  ನೀರವತೆ ತುಂಬಿದ ಕತ್ತಲಿನಲ್ಲಿ ಬೆಳದಿಂಗಳು ಅರಳಿದಂತೆ, ಇಂದೂ ಬರುವೆ ತಾನೇ...

ತಪ್ಪಾಯಿತು ..

ಯಾಕೋ ಹೀಗೆ ಮೈ ಚಾಚಿಕೊಂಡದ್ದು ತಪ್ಪಾಯಿತು.. ತಲೆಯೊಳಗಿನ ಚಿಂತೆಗಳಿಗೆಲ್ಲಾ ದಿಂಬಿನೊಡನೆ ವ್ಯವಹಾರವಾಗಿ ನನ್ನನ್ನು ಆಳದಾಳದ ನಿದ್ರೆಗೆ ದೂಡಲಾರಂಭಿಸಿದವು; ನಾನು ಮರೆಯಬಾರದೆಂದು  ಮತ್ತೆಮತ್ತೆ ಚಪ್ಪರಿಸಿ ನೆನಪಿಸುತ್ತಿದ್ದ ಬಯಕೆಗಳಿಗೆಲ್ಲಾ ಸದ್ದಿಲ್ಲದ ಸ್ವಾತಂತ್ರ್ಯ ; ನನಗೆ ನಾನೇ ಹಗುರವಾಗಿ ಮೋಡವಾಗಿ ತೇಲಿ ತೇಲಿ ಎಲ್ಲಿ ತಲುಪಿದೆನೆಂಬುದೇ ನನಗರಿವಿಲ್ಲ.. ಯಾಕೋ ಹೀಗೆ ಮೈ ಚಾಚಿಕೊಂಡದ್ದು ತೀರಾ ತಪ್ಪಾಯಿತು.. ಸಾವು ಸಹಜವೋ ಅಸಹಜವೋ ತಲೆಕೆಡಿಸಿಕೊಳ್ಳುವಂತಾಗಿದೆ..     - ಜಾನ್ ಸುಂಟಿಕೊಪ್ಪ 

ಒಂದು ನಿಟ್ಟುಸಿರು

ಈಗ  ಏನೂ ಅಲ್ಲದವನಾಗುವುದೆಂದರೆ ಏನರ್ಥ?! ಕತ್ತಲು ಕರಗಿ ಬೆಳಗು ಅರಳಿ ಅಣುರೇಣುತೃಣಕಾಷ್ಟಗಳಲೂ ನಾನು ಕಿರಣವಾಗಿದ್ದೆ ; ಲಜ್ಜೆಯನೇ ಮೈತುಂಬಿಕೊಂಡಾಗ ಬೆತ್ತಲುತನವನು ಹೊದ್ದುಕೊಂಡು ನಿನ್ನೊಳಗೂ ಹೊರಗೂ ಮೇಘವಾಗಿದ್ದೆ,... ಮಳೆಯಾಗಿದ್ದೆ ಮತ್ತೆ   ಈಗ... ಏನೂ ಅಲ್ಲದವನಾಗುವುದೆಂದರೆ.. ಇರಲಿ ಬಿಡು.. ನಿನ್ನೊಳಗಿನ ನನ್ನ ಪಿಸುಮಾತುಗಳೆಲ್ಲಾ  ಮೌನವಾಗಲಿ ಬಿಡು; ಮತ್ತೆ ನಾನು... ?! ಇಲ್ಲವಾಗಿ ಬಿಡುತ್ತೇನೆ ನಿನ್ನೊಳಗೆ ಹೇಗೋ ನನ್ನೊಳಗೂ ಕಾಣೆಯಾಗಿ ಬಿಡುತ್ತೇನೆ  ಹೇಗೂ... ನಾನೂ ಏನೂ ಅಲ್ಲದವನು ;                - ಜಾನ್ ಸುಂಟಿಕೊಪ್ಪ 

ಆಗ ಕತ್ತಲಾಗಿತ್ತು - ಒಂದು ಅನುವಾದಿತ ಕವಿತೆ

*ಆಗ ಕತ್ತಲಾಗಿತ್ತು*            1 ಯೂದ ಎದ್ದು ಹೋದಾಗ ಕತ್ತಲಾಗಿತ್ತು ! ಪ್ರಭುವಿನ ಎದೆಯಂಗಳದಲ್ಲೀಗ ಹುಣ್ಣಿಮೆ         2 ಯೂದ ಬಿಟ್ಟುಹೋದ ದ್ರಾಕ್ಷಾರಸವನ್ನು ಯೇಸು ಕುಡಿದು ಬಿಟ್ಟರು ಅದಕ್ಕೋ ಏನೋ ಯೂದನ ಮುತ್ತು 'ದ್ರೋಹ' ಎಂದೆನ್ನಿಸಲೇ ಇಲ್ಲ!           3 ಸಿಪಾಯಿಗಳೊಂದಿಗೆ ಯೂದ ಬಂದಾಗ ತೋಳಗಳ ಗುಂಪಿನಲ್ಲಿ ಸಿಕ್ಕಿಕೊಂಡ 'ಕುರಿಮರಿ'ಯಂತೆಯೇ ಕಾಣುತ್ತಿದ್ದ... ಕುರಿಗಾಹಿ ಪ್ರಭು ಯೇಸು ಮನ ಮರುಗಿದರು!          4 ಯೂದ ಮುತ್ತಿನ ಮೂಲಕ "ದೇವರ ಕುರಿಮರಿ ಇದೇ" ಎಂದು ತೋರಿಸಿದ... ಬಲಿಪೀಠ ಕುರಿಮರಿಯ ನೆತ್ತರಿಗಾಗಿ ಹಪಹಪಿಸುತ್ತಿತ್ತು!          5 ಕುರಿಮರಿಯೇ ಕುರಿಗಾಹಿಯನ್ನು ಪರಾಧೀನಪಡಿಸಿದಾಗ ಕುರಿಮಂದೆಯ ಗತಿ !? ಪ್ರಭು ಯೇಸು ಮುಂದಿನದ್ದು ಚಿಂತಿಸಿ ರಕ್ತದ ಬೆವರು ಹರಿಸಿದರು!         6 ಯೂದನ ತುಟಿಗಳು ಪವಿತ್ರವಾದ ಪ್ರಭುವಿನ  ಕೆನ್ನೆಯನ್ನು ಸ್ಪರ್ಶಿಸಿದಾಗ ಮಾರುತ್ತರವಿಲ್ಲದೆ ಪ್ರಭು ಬೋಧಿಸಿದ ಪಾಠ- ಪ್ರೀತಿ ಒಂದು ' ಆಯ್ಕೆ ' !        7 ಒಬ್ಬರನ್ನೊಬ್ಬರು  ಆಲಂಗಿಸಿದಾಗ ಇಬ್ಬರೂ ಸಮಾನವಾಗಿ ಬೆವೆತಿದ್ದರು! ಹೃದಯದಲ್ಲಿ ಇಬ್ಬರಿಗೂ ಹರಿತವಾದ ಗಾಯ ! ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ ಕಾರ್ಮೆಲಿತ್ ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ