Posts

Showing posts from August, 2016

ಕಡಲ ಹೆಣ

Image
ಇಗೋ ನೋಡಿ ದಡ ಸೇರಿದೆ ಕಡಲ ಹೆಣ! ಅದೆಷ್ಟು ನೀರು ಕುಡಿದಿದೆಯೋ ಕಾಣೆ ಸಾಧ್ಯವಾದಷ್ಟೂ ನೀಲಿಯಾಗಿದೆ ವಿಷಪ್ರಾಶನವಾಗಿರಲಿಕ್ಕೂ ಸಾಕು! ತೊಯ್ದಾಡುವ ಅಲೆಗಳ ಉನ್ಮತ್ತ ಸ್ಖಲನಗಳೂ ಇದೀಗ ಮುಚ್ಚಿಟ್ಟ ಸತ್ಯ! ಮರಣೋತ್ತರ ಪರೀಕ್ಷೆಯ ರಿಪೋರ್ಟು ಇನ್ನು ಬರಬೇಕಷ್ಟೇ... ಒದ್ದೇ ಮರಳಿನ ತುಂಬಾ ಹಾಹಕಾರ- ನಿಟ್ಟುಸಿರುಗಳ ಹೆಜ್ಜೆಗುರುತುಗಳು, ಆವಿಯಾಗುವ ನೀಲಹನಿಗಳ ತುಂಬಾ ಅಗಾಧತೆಯ ನಿಗೂಢ ಕನಸುಗಳು; ಕಡಲಿನ ಒಡಲ ಬೇಗೆಯನೆಲ್ಲಾ ಕಣ್ತುಂಬಿಸಿಕೊಂಡ ನಾಯಿಗೂ ಆ ಸಿಂದಾಬಾದಿನದೇ ಚಿಂತೆ; ಒಂದೇ ಒಂದು ಉಬ್ಬರವಿಳಿತ ಸಾಕು ಕಡಲ ಹೆಣವ ಹೂವಾಗಿಸಲು ಗರಿಗೆದರುವ ಬಲೆಗಳ ಹಸಿರಾಗಿಸಲು ಹೊಟ್ಟೆ ಚುರುಗುಟ್ಟುವ ಹರಕಲು ಚಡ್ಡಿಯವನ ಮುಖವರಳಿಸಲು... ಬಾ ಕಡಲೇ ಬಾ... ಈ ಬರಗೆಟ್ಟ ಕಿನಾರೆಗಳ ಇಲ್ಲವಾಗಿಸು ಈ ಕಡಲ ಹೆಣವ ನೋಹನ ನಾವೆಯಾಗಿಸು - ಜಾನ್ ಸುಂಟಿಕೊಪ್ಪ. (ನೋಹ ಬೈಬಲಿನ ಒಬ್ಬ ಪುಣ್ಯ ಪುರುಷ ,ಜಲಪ್ರಳಯ ಬಂದಾಗ ದೇವರ ಆಜ್ನಾನುಸಾರ ಒಂದು ನಾವೆಯನ್ನು ಕಟ್ಟಿ  ಸಕಲ ಜೀವಜಂತುಗಳಲ್ಲಿ ಒಂದೊಂದು ಜತೆಯನ್ನು ಕಾಪಾಡಿದವ.)

ಹಾವು,ಹಕ್ಕಿ ಮತ್ತು ಅಕ್ಕ

> > > ಹೊಸ ವರುಷದ ದಿನ > > > ಮನೆಗೆ ಅಕ್ಕ ಬಂದಾಗಿತ್ತು > > ಸೂಟುಕೇಸಿನೊಂದಿಗೇ...! > > > * * * * * * > > > ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು > > ಸವರುತ್ತಾ ಹತ್ತಿದ ಹಾವು > > ಪೊರೆ ಕಳಚುತ್ತಿತ್ತು... > > ಧಾವಂತದಿಂದ ನಾನು ಓಡಿದ್ದೇ ಓಡಿದ್ದು, > > ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು, > > ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ- > > 'ದೂರ ಹೋಗೋ..ಮುಟ್ಟಬ್ಯಾಡ,,,' > > ಅಕ್ಕ ಅರಚಿದಳು, > > ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ! > > > > * * * * * > > > > ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ, > > ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ, > > ಇಬ್ಬರದೂ ಎಂತಹ ಸಂಧಾನವೋ ಕಾಣೆ > > ಅಕ್ಕ ತೆರೆದ ಬಾಗಿಲಲೇ > > ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು > > > * * * * * * > > > > ನೆತ್ತಿಗೇರಿದ ಪಿತ್ತದೊಂದಿಗೇ > > ಅಕ್ಕಳ ಹುಡುಕಿದೆ > > ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು, > > 'ಹಕ್ಕಿಯಂತೆ ಹಾರುವುದು ಹೇಗೆ!? > > > > > > > ಕೊಂ

ಭಯ

ನೀರಿಗೆ ಎಸೆದ ಚಪ್ಪಟೆ ಕಲ್ಲು ಅವಸರವಸರವಾಗಿ ಕೊಳದ ಗಡಿ ದಾಟಿದ್ದು ಕಂಡು ಹೃದಯ ಕಸಕ್ಕೆಂದಿತು ! ಪಕ್ಕದ ಮನೆಯ ಹಸುಗೂಸು ಒಂದೇ ಸಮನೆ ಅಳುತ್ತಿದೆ; ಜಗತ್ತಿನ ಕೊಳದಲ್ಲಿ ಇನ್ನೊಂದು ಕಲ್ಲು ಇಳಿದು ಬರುವುದ ಚಿಂತಿಸಿಯೇ ಹೃದಯ ಮೊಣಕಾಲೂರಿತು. ಕೊಳದಲ್ಲಿ ಎದ್ದು ನಿಂತ ಅಲೆಗಳ ಮೇಲೆ ಇದೀಗ ಸೂರ್ಯನ ಕಿರಣಗಳ 'ಜಮಾಅತ್' ಆರಂಭವಾಗಿದೆ. ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ. ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ.