Posts

Showing posts from 2022

ಏನೂ ಅಲ್ಲದವನಾಗುವುದೆಂದರೆ ..

ಮೂಡಿದ ಸೂರ್ಯ ಎಂದಿನಂತಿಲ್ಲ.. ಬೀಸುವ ಸುಳಿಗಾಳಿಯಲೂ ತಂಪಿಲ್ಲ ಏಕೋ ಏನೋ ಎದೆ ತುಂಬ  ಮೋಡ ಕವಿದ ವಾತಾವರಣ  ಏನೂ ಅಲ್ಲದವನಾಗುವುದೆಂದರೆ.. ನನ್ನೊಳಗೆ ನಾನೇ ಮಾತಾಗುತ್ತೇನೆ ಮಾತು ಮರೆತು ಮೌನವಾಗುತ್ತೇನೆ ಶೂನ್ಯದೊಳಗಿನ ನಿಟ್ಟುಸಿರಿಗೂ ನಾನು ಬೇಡವಾಗಿರಬೇಕು.. ಏನೂ ಅಲ್ಲದವನಾಗುವುದೆಂದರೆ .. ಏನೂ ಅಲ್ಲದವನಾಗುವುದೆಂದರೆ .. ನಿಜಕ್ಕೂ ನಾನು ಏನೂ ಅಲ್ಲದವನೇ ಇರಬೇಕು  ಬೀಸುವ ತಂಗಾಳಿಗೂ.. ಇದೀಗ ಉದುರಿದ ಹಣ್ಣೆಲೆಗೂ.. ಏನೂ ಅಲ್ಲದವನಾಗಿರಬೇಕು .. ಏನೂ ಅಲ್ಲದವನಾಗಿರಬೇಕು ...      - ಜಾನ್ ಸುಂಟಿಕೊಪ್ಪ 

ಪ್ರಾಣ

ಎಲ್ಲೋ ಕಳೆದುಹೋದಂತಿದೆ ನನ್ನ ಪ್ರಾಣ... ಆತ್ಮದ ಉಳಿವಿಗಾಗಿ ಹಪಹಪಿಸಿ  ನ್ಯಾಯ ನೀತಿ ಗಹಗಹಿಸಿ ಒಳ್ಳೆಯವನಾಗಲು ಬಯಸಿ ಬಯಸಿ ಮತ್ತಷ್ಟು ಕೆಟ್ಟವನಾದೆ... ಇರಲಿ,.. ಅದೆಷ್ಟು ನೋವುಗಳ ಉಂಡಿದ್ದೇನೆ ಕನಸುಗಳ ಕಂಡೂ ಕಂಡೂ ಬರಿದಾಗಿದ್ದೇನೆ ಪ್ರಾಣವಿಲ್ಲದ ಆತ್ಮ  ಆತ್ಮವಿಲ್ಲದ ಪ್ರಾಣ ಊಹಿಸಲಾಗುತ್ತಿಲ್ಲ; ಒಳ್ಳೆಯದಾಗಲಿ... ಪ್ರಾಣವೂ ಆತ್ಮವೂ ಶಾಶ್ವತವೆಂದು ಕಂಡವರಾರು?! ಗಂಟಲು ಬಿಗಿದು  ಕಣ್ಣು ತುಂಬುವುದು ಮಾತ್ರ ಸತ್ಯ ,.. ಅದಿಲ್ಲದಿದ್ದರೆ ಒಂದು ನಿಟ್ಟುಸಿರು... ಹೋಗಿ ಬರುತ್ತೇನೆ... ಛೇ...  ತಪ್ಪಾಯಿತು.. ಬರುವುದಿನ್ನೆಲ್ಲಿಗೆ ಹೊರಡುತ್ತೇನೆ...                        - ಜಾನ್ ಸುಂಟಿಕೊಪ್ಪ

ಹೀಗೊಂದು ಹತ್ಯೆ

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ನಾನಾಗ ಕುಶಾಲನಗರದ ಕೆ.ಬಿ.ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟವಾಗಿತ್ತು,ಆಗ ಮೊಬೈಲ್ ಇಲ್ಲದ ಕಾರಣ ಫಲಿತಾಂಶ ನೋಡಲು ಕಾಲೇಜಿಗೇ ಹೋಗಬೇಕಿತ್ತು.  ನಾನೂ ನನ್ನ ಗೆಳೆಯ ದಿಲೀಪನೂ ಅಂದು ಕಾಲೇಜಿಗೆ ಹೋದೆವು. ಗೆಳೆಯ ಪಾಸಾಗಿದ್ದ ; ಕಾಲೇಜಿನ ಪ್ರಾಂಶುಪಾಲರು ನನ್ನನ್ನು ತಬ್ಬಿ ಮುದ್ದಾಡಿ ಅಭಿನಂದಿಸಿದರು . ಕಾಲೇಜಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರೇಯಸ್ಸು  ನನ್ನದಾಗಿತ್ತು. ನನ್ನಮ್ಮಳಿಗೆ ಅಂಕಪಟ್ಟಿ ತೋರಿಸಲೆಂದು ಸಡಗರದಿಂದ ಮನೆಗೆ ಹೊರಟಾಗ ಒಂದು ಘಟನೆ ನಡೆಯಿತು. ಬಸ್ ಸ್ಟ್ಯಾಂಡಿನ ಹಿಂಬದಿ ಮೈದಾನದಲ್ಲಿ ಜನರ ಗುಂಪೊಂದಿತ್ತು. ಯಾರೋ ಒಬ್ಬ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿದ್ದರು. ಆ ಮನುಷ್ಯ ಬಲು ಕೆಟ್ಟದಾಗಿ ಎಲ್ಲರನ್ನೂ ಶಪಿಸುತ್ತಿದ್ದ. ಒಂದಿಬ್ಬರು ಕಲ್ಲೆಸೆಯುತ್ತಿದ್ದರು , ಕೆಲವರು ಜೋರಾಗಿ ನಗುತ್ತಿದ್ದರು. ನನಗೆ ಇದು ಸರಿ ಕಾಣಲಿಲ್ಲ , ಗೆಳೆಯನಿಗೆ ಈ ಮನುಷ್ಯನನ್ನ ಬಿಡಿಸುವ ಅಂದೆ. "ಈ ಹುಚ್ಚ ಯಾರಿಗೆ ಏನು ತೊಂದರೆ ಕೊಟ್ಟಿದ್ದಾನೋ ಗೊತ್ತಿಲ್ಲ , ಬಿಟ್ಟರೆ ಇನ್ನೇನು ಅನಾಹುತವಾಗುತ್ತೋ , ನಡಿ ಹೋಗೋಣ " ಅಂದ. ನನಗೂ ಸರಿಯೆನಿಸಿತು ಅವನ ಮುಖ ನೋಡಲೂ ಭಯವಾಗಿ ಸೀದಾ ಬಸ್ ಸ್ಟ್ಯಾಂಡಿನೊಳಗೆ ನಡೆದೆ. ನಮ್ಮೂರಿಗೆ ಹೋಗುವ ಬಸ್ಸಿನಲ್ಲಿ ಡ್ರೈವರ್ ಹಿಂದಿನ ಸೀಟು ಸಿಕ್ಕಿತು . ಇನ್ನೂ ಡ್ರೈವರ್ ಬರುವಷ್ಟರಲ್ಲಿ ಆ ಮಾನಸಿಕ ಅಸ್ವಸ್ಥ