Posts

Showing posts from February, 2019

ಒಂದು ಕಾರು ಮತ್ತೊಂದಿಷ್ಟು ಜೀವನಾನುಭವ

ನಿನ್ನೆ ಬಿ.ಇ.ಓ.ರವರ ಸಭೆಯಲ್ಲಿದ್ದಾಗಲೇ ಪತ್ನಿ ಆಸ್ಪತ್ರೆ ಸೇರಿರುವ ಸುದ್ದಿ ಕೇಳಿ ಆತುರಾತುರವಾಗಿ ಮನೆ ಸೇರಿ ಲಗೇಜು ಹೊಂದಿಸಿ ಬಸ್ಸತ್ತಿ ಬಾಳುಪೇಟೆ ತಲುಪುವಾಗಲೇ ಸೂರ್ಯ ತಣ್ಣಗೆ ಮುಳುಗಲು ಹೊರಟು ಬಿಟ್ಟಿದ್ದ.ಇನ್ನು ಬಸ್ಸು ಸಿಕ್ಕು ನಾನು ಮಂಗಳೂರು ತಲುಪುವುದು ಎಷ್ಟೊತ್ತಿಗಪ್ಪಾ ಎಂದು ತಲೆಕೆಡಿಸಿಕೊಳ್ಳುತ್ತಾ ಹಳದಿ ಬೋರ್ಡಿನ ಟ್ಯಾಕ್ಸಿ ಗಳಿಗೂ ಕೈಚಾಚತೊಡಗಿದೆ. ನನ್ನ ಅದೃಷ್ಟವೋ ಏನೋ ಒಂದು ಗಾಡಿ ಸಿಕ್ಕೇಬಿಟ್ಟಿತು.          ಯಾರೂ ಯಾರನ್ನೂ ನಂಬುವಂತಿಲ್ಲದ ಕಾಲದಲ್ಲಿ ಅನಿವಾರ್ಯತೆಗಳು ಹೊಸ ದಾರಿಗಳನ್ನು ಸೃಷ್ಟಿಸುತ್ತವೆ.ಮತ್ತು ಇಂತಹ ಸಂದರ್ಭಗಳಲ್ಲಿ ಸಿಗುವ ಸ್ನೇಹಕ್ಕೆ ವಿಶೇಷತೆಯಿರುತ್ತದೆ. ನನಗೆ ಗಾಡಿ ನಿಲ್ಲಿಸಿದ ವ್ಯಕ್ತಿ ಮಾರುತಿ ಎಂಬ ಹೆಸರಿನವರು ವಯಸ್ಸು 26 ಮಾತ್ರ ಆದರೆ ಸಣ್ಣ ವಯಸ್ಸಿನಲ್ಲೇ ತಂದೆತಾಯಿ ಇಬ್ಬರನ್ನೂ ಕಳೆದುಕೊಂಡು ಇರುವ ಇಬ್ಬರು ತಂಗಿಯರಿಗೆ ತಾನೇ ತಂದೆಯೂತಾಯಿಯೂ ಆಗಿ  , ತಂಗಿಯರಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು ಒಬ್ಬಳ ಮದುವೆಯನ್ನೂ ಮಾಡಿಸಿ, ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ , ಅಪಘಾತಕ್ಕೀಡಾದ ಗೆಳೆಯನ ಚಿಕಿತ್ಸೆಗಾಗಿ, ಗಾಡಿ ಕೊಳ್ಳಲು ಹೀಗೆಲ್ಲಾ ಆಗಿ  ಸಾಲವಾದ ಬರೋಬ್ಬರಿ 12 ಲಕ್ಷ ರೂಪಾಯಿಗಾಗಿ ಎಲ್ಲವನನ್ನೂ ಕಳಕೊಂಡು ಊರವರಿಂದ ಸಂಬಂಧಿಕರಿಂದ ನೀನಿನ್ನು ಏಳುವುದೇ ಇಲ್ಲ ಕಣೋ ,. ನಿನ್ನ ಕಥೆ ಮುಗಿದೇ ಬಿಡ್ತು ,. ಎಂಬ ಚುಚ್ಚು ಮಾತುಗಳನ್ನೇ ಹೃದಯದಲ್ಲಿ ಬೆಚ್ಚಗಿರಿಸಿ ಸೋಲನ್ನೇ ಸವಾಲಾಗಿಸಿ ಹ

ಒಂದು ಹಾಡು

ಅಂತರಂಗ ಹರಿದಿದೆ ಹೇಗೆ ತಾಳಲಿ ಅಂಧಕಾರ ಕವಿದಿದೆ ಹೇಗೆ ಸಾಗಲಿ ಹೃದಯ ಚೂರಾಗಿದೆ ಬದುಕು ಗೋಳಾಗಿದೆ ಹೇಗೆ ಹೇಳಲಿ.. //2// ಈ ಜೀವನ ಸುಳಿಗಾಳಿಗೆ ಚದುರಿದ ಮೋಡ ಪ್ರತಿ ಹೆಜ್ಜೆಯೂ ವಿಧಿಯಾಟದ ಕುಹಕದ ನೋಟ ಹೇಗೆಹೇಗೆ ಅಲೆದರೂ ದಾರಿಯೇ ಇಲ್ಲ ಬದುಕೇ ಬೇಡವೆಂದರೂ ಆಟ ಮುಗಿಯಲ್ಲ // ಅಂತರಂಗ // ನನ್ನ ಬದುಕು ಪಾಪವೇ ತುಂಬಿದ ಲೋಟ ಪ್ರತಿ ಗುಟುಕೂ ವಿಷವೇ ತುಂಬಿದೆ ಈಗ ಹೇಗೆ ತಾನೆ ಅರಳಲಿ ಪ್ರಭೂ ಬಾ ಬೇಗ ಉಸಿರ ಮಧುರ ಗಾನಕೆ ಆಗು ನೀ ರಾಗ // ಅಂತರಂಗ //