Posts

Showing posts from 2014

ಕಾಮ್ರೇಡನೊಬ್ಬನ ಸ್ವಗತ

ತಾಯೇ ,,,,. ನನ್ನ ಬಟ್ಟಲಿಗೊಂದಿಷ್ಟು ಕ್ರಾಂತಿಯ ಸುರಿ,,,, ನನ್ನ ಒಡಲಾಳದ ಬಂಡಾಯದ ಕಿಡಿ ಹೊತ್ತಿ ಉರಿಯಲಿ ಒಮ್ಮೆ ನೋಡು,,... ನನ್ನೊಳಗಿನ ಕಿಚ್ಚು ಸುಡಲು ಪರಿತಪಿಸುತಿದೆ ಕೊಳಪೆ ಹಿಡಿದು ಪೂ,,,.ಪೂ,,,,.ಎಂದು ಊದಿ ಸಾಕಾದ ಬ್ರೆಕ್ಟ್ ಹೊಗೆಯ ಕಪ್ಪನೇ ದೂರುವ ವಾಲ್ಟೇರ್ ಕಣ್ಣುರಿಯೆನ್ನುತ ಕಾಣೆಯಾಗಿದ್ದಾರೆ ,,. ನೆತ್ತರ ನೆಕ್ಕಿ ನೆಕ್ಕಿ ಹಬೆಯಾಡುವ ಆತ್ಮಗಳಿಂದಲೇನೋ ಆ ಗಿಲೋಟಿನಿಗೇ ತುಕ್ಕು ಹಿಡಿದಿದೆ ಉಳಿದದ್ದು ನನ್ನ ನಾಲಿಗೆಯಷ್ಟೇ ,,.. ಕಿರುನಾಲಗೆಗೇ ಕುಣಿಕೆ ಬಿಗಿವ ಮುನ್ನ ನನ್ನ ರುದ್ರಗೊಳಿಸು - ಬೆಳಕು ಸ್ವತಂತ್ರಗೊಳ್ಳಲಿ ,,..         -ಜಾನ್ ಸುಂಟಿಕೊಪ್ಪ .

ಚೆಲುವಿನ ಚಿತ್ತಾರ

Image
ಚೆಲುವಿನ ಚಿತ್ತಾರ

ವೈಫಲ್ಯ

ಚಿಂತಕರ ವೈಫಲ್ಯ ಎಲ್ಲಿದೆ ? ಮೈಕು ಫ್ಯಾನಿನ ಕರೆಂಟು ಬಿಲ್ಲಿನಲಿ ಮೂಲೆಯಲಿ ರಾಶಿ ಹಾಕಿದ use & throw ತಟ್ಟೆ ಲೋಟಗಳಲಿ ಸಭಾಂಗಣ ತು಼ಬಿದ ಅಸಮಾಧಾನದ ನಿಟ್ಟುಸಿರುಗಳಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಆಕಳಿಕೆಗಳಲಿ ಮತ್ತು ... ಕರವಸ್ತ್ರಗಳಿಗಂಟಿದ ಬೆವರ ಹನಿಗಳಲಿ..

ಕಲ್ಲು ಕರಗುವ ಸಮಯ

Image
ನನ್ನ ಪ್ರಾಯ 30 ವರ್ಷ.ಬಾಲ್ಯದಿಂದಲೂ ಅಕ್ಷರಗಳ ಸಹವಾಸದಲಿ ಬೆಳೆದವನು ನಾನು.ದಟ್ಟವಾದ ಕಾಫಿತೋಟಗಳ ಗವ್ವೆನ್ನುವ ಏಕಾಂತದಲಿ.ಮನುಷ್ಯರ ಒಡನಾಟವೇ ಇಲ್ಲದ ಜಗತ್ತಿನಲ್ಲಿ , ಮೇಲು-ಕೀಳಿನ ತೀರದಲ್ಲೇ ಅಪ್ಪಟ ಗೆಳೆಯರಾದದ್ದು ಬರೇ ಪುಸ್ತಕಗಳು. ಅಪ್ಪನ ಓದುವ ಹುಚ್ಚಿಗೆ ಜತೆಗಾರನಾಗಿ ಇಡೀ ಜಗತ್ತನ್ನು ಪಕ್ಕದಲ್ಲಿ ಕೂರಿಸಿಕೊಂಡ ಭೂಪ ನಾನು.ಆದರೆ ಬಸೂ ಸರ್ ರವರ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ಪುಸ್ತಕದಷ್ಟು ಯಾವುದೂ ನನ್ನನ್ನು ಪ್ರಭಾವಿಸಲಿಲ್ಲ . ದಟ್ಟವಾಗಿ ಹರಡಿದ ಈ ಕಾಫಿತೋಟಗಳಲ್ಲಿ ಒಬ್ಬೊಬ್ಬ ವ್ಯಕ್ತಿಯೂ ಒ಼ದೊಂದು ದ್ವೀಪದಂತೆ . ಬಹುಶಃ ನನ್ನ ಅಪ್ಪ ಸಾಯುವ ಮುನ್ನ ಈ ಪುಸ್ತಕವನ್ನು ಓದಿದ್ದರೆ ಅವರ ಸಾವಿಗೆ ಇನ್ನಷ್ಟು ಸಾರ್ಥಕತೆ ಇರುತ್ತಿತ್ತೇನೋ .... ಕವಿತೆಗಳ ಜಗತ್ತಿನಲ್ಲಿ ನಾನೂ ಸುತ್ತು ಹಾಕಿದ್ದೇನೆ, ಸಾಹಿತ್ಯದ ಎಲ್ಲಾ ಪ್ರಕಾರಗಳ ಮೂಲೆ ಮೂಲೆಗೆ ಹೋಗಿ ಅನ್ಯಮನಸ್ಕನಾಗಿ ತೆಪ್ಪಗೆ ಕೂತು ಒ಼ದು ದೊಡ್ಡ ನಿಟ್ಟುಸಿರನು ಬಿಟ್ಟಿದ್ದೇನೆ.ಆದರೆ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ನನ್ನ best ಪುಸ್ತಕ. ಇದರ ಸಾಲುಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ನನಗಿದರ ಅರಿವಿಲ್ಲ.. ಪ್ರತಿ ಬಾರಿ ನೋವಾದಾಗ , ನಲಿವಾದಾಗ , ಅವಮಾನವಾದಾಗ ಸುಮ್ಮಗೆ ಕೂತು ಈ ಪುಸ್ತಕದೊಳಗೆ ನುಸುಳಿಬಿಡುತ್ತೇನೆ ಆ ಸಾಲುಗಳು ನನಗೆ ಅಷ್ಟರಮಟ್ಟಿಗೆ ಆಪ್ತವಾಗಿ ಬಿಟ್ಟಿದೆ . ಈ ಸಾಲುಗಳು ಇಷ್ಟರ ಮಟ್ಟಿಗೆ ಕಾಡಲು ಕಾರಣವೇನೆಂದು ಬಹಳ ಸಲ ನನ್ನನ್

ಅಪಾತ್ರ

Image
ಹೊಂಚು  ಹಾಕುವ   ಆಸೆಗೆ   ಬಲವಂತದ  ಕಡಿವಾಣ   ಹಾಕಿದೆ...   ದೂರ  ಹೋಗುವ  ಮುನ್ನ    ಮನಸ್ಸು  ಅಲ್ಲೇ ಉಳಿಯಿತು   ಬಹುಶಃ ಬುಸುಗುಟ್ಟುವಿಕೆಯೆಂದರೆ ನನಗಾಗದು;

ಒಂದು ಸಮಾಧಿಯ ಕಥೆ

Image
ಅವಳೆಂದರೆ ಅವನಿಗಿಷ್ಟ ಬಹುಶಃ ಅವಳಿಗೂ ಕೂಡಾ,,, ಅಲೆ ಅಲೆಯಾಗಿ ಹನಿವ ಹಸಿವು ಸೊಬಗು ಹೆಚ್ಚಿಸೋ ಒಲವು ಹತ್ತಿರವಾಗಿಸಿದ್ದವು, ಬೆಚ್ಚಗಾಗಿಸಿದ್ದವು ,. ಈಗ ಅವನಿಲ್ಲ ಅವನ ಬೆವರನು ಮಣ್ಣ ವಾಸನೆಗೆ ಬೆರೆಸಿ ಬೆಚ್ಚಗೆ ಹೊದ್ದು ಅವಳೀಗ ಶಾಶ್ವತವಾಗಿ ಮಲಗಿದ್ದಾಳೆ ಬಹುಶಃ ಆಸುಪಾಸಿನ ಗಾಳಿಯಲಿ ಇನ್ನೂ ಅವನ ಬೆವರಿದೆ.,.          - ಜಾನ್ ಸುಂಟಿಕೊಪ್ಪ .

ಎಲ್ಲಾ ಮುಗಿದ ಮೇಲೆ ,,,

Image
ನೀನು ಮಲಗಿಯಾದ ಮೇಲೆ   ನಾನು ಎಚ್ಚರಗೊಂಡೆ,  ನಿನ್ನ ಕನಸಿನ ಆಳದಾಳಕ್ಕೂ  ನನ್ನ ಹೃದಯ ಈಜಾಡುತ್ತಿತ್ತು ..  ನೀನು ಹೊದ್ದ ಹೊದಿಕೆಯ ತುಂಬಾ   ನನಗರಿವಿತ್ತು,  ನಿನ್ನ ಅದುರುವಿಕೆಯಿಂದ  ನನಗಿದರ ಅರಿವಾಯಿತು ,.  ನೀನು ಬಲ್ಲೆಯಾ?!  ನಾನು ಯಾರು !?  ಶತ ಶತಮಾನಗಳಿಗೂ ಲೆಕ್ಕ ಸಿಗಲಿಲ್ಲ   ಐನ್ ಸ್ಟಿನ್ ಡಾರ್ವಿನ್ ಸಾಕ್ರೆಟಿಸ್ ರಿಗೂ  ಹುಚ್ಚು ಹೊಳೆಯಲಿಲ್ಲ  ಪೆರುವಿನ ಗಿರಿಗಳ ತುತ್ತತುದಿಯ ಆಳದಲ್ಲೂ ...  ಈಜಿಪ್ಟಿನ ಪಿರಮಿಡ್ ಗಳ  ಗುಪ್ತತೆಯ ಬಯಲಲೂ ,,,  ನೀನಿರಲಿಲ್ಲ ನಾನಿದ್ದೆ ,.?!  ಭಯವಾಗಿ  ಭಕ್ತಿಯಾಗಿ  ಶಕ್ತಿಯಾಗಿ    ಈಗಲೂ ಇದ್ದೇನೆ - ನಿರ್ಜೀವ ಧರ್ಮಗಳಲ್ಲಿ ಕೈಲಾಗದ ಮೂರ್ತಿಗಳಲ್ಲಿ. ನನಗೆ ಭಯವಿದೆ -  ನನ್ನ ವ್ಯಾಲಿಡಿಟಿಯ ಬಗ್ಗೆ  ಸಂಚುಹೂಡುವ  ಭೂಗತ ಬಿಗ್ ಬ್ಯಾಂಗ್ ಗಳ ಬಗ್ಗೆ    ಅಂತರಿಕ್ಷದ ಆಳಅಗಲ ಬಗೆವ    ಬೇಟೆನಾಯಿ ಉಪಗ್ರಹಗಳ ಬಗ್ಗೆ .,.  ವ್ಯಾಪಾರ ಕಡಿಮೆಯಾದರೇನಂತೆ  ಮುಂದೇನಾದೀತೋ  ಕಾದುನೋಡಬೇಕು ,.,                - ಜಾನ್ ಸುಂಟಿಕೊಪ್ಪ.

ಮುಗಿದ ಮೇಲೆ

ಕಣ್ಣ ಮುಚ್ಚಿ ಮಲಗಿದೆ ಭೂತಗಳು ಸರಿದಾಡುತ್ತಿದ್ದವು ಗಾಬ್ರಿಯಲ್ ಮಾರ್ಕೆಜ್ ನ ಅಜ್ಜಿ ಹೇಳಿದ ಕತೆಯಂತೆ, ಮನದ ಅಂಗಳದಲಿ ಸದ್ದಿಲ್ಲದೆ ಕೋಲ ಕುಣಿಯುತ್ತಿದ್ದವು,.. ಹೌದು ,.. ಈ ಅಪಧಮನಿ - ಅಭಿಧಮನಿ ಕೋಟಿಗಟ್ಟಲೆ ಲೋಮನಾಳಗಳಲ್ಲೆಲ್ಲಾ ಅಡಗಿ ಕುಳಿತೆ, ನನಗೆ ಆ ದೆವ್ವದ ಕಂಗಳ ನೀರವ ಕತ್ತಲ ಭಯವಿತ್ತು !! ಈಗ ಕಣ್ಣು ತೆರೆದಿದ್ದೇನೆ ಪರಿಚಿತ -ಅಪರಿಚಿತರೆಂಬ ದೆವ್ವಗಳ ಮುಂದೆಯೇ ನಾನು ಸರಿದಾಡುತ್ತಿದ್ದೇನೆ- ಮತ್ತು ನನ್ನ ಕಂಗಳಲೂ ನೀರವ ಕತ್ತಲಿದೆ,..         - ಜಾನ್ ಸುಂಟಿಕೊಪ್ಪ .

ಕ್ರಾಂತಿ

Image
ಕಣಿವೆಯ ಹುಲ್ಲುಗಾವಲಿನಲಿ ಮಲಗಿದ್ದ ನನಗೆ ಕನಸಿನಲೂ ವರ್ಡ್ಸ್ ವರ್ಥ್ ಬರಲಿಲ್ಲ ಕಾಲರಿಡ್ಜ್ ಕೂಡ ,.. ಎಲ್ಲೋ ಅರಳಿದ ಡ್ಯಾಫೋಢಿಲ್ ಗಳು ಹರೆಯ ಬಿರಿದ ಲಿಲ್ಲಿ ಹೂಗಳು ಘಮವ ಸಾರುತ್ತಿದ್ದವೇನೋ ನನ್ನ ಮೂಗಿಗೆ ಗುರುತು ಸಿಗುವಷ್ಟರಲ್ಲಿ ಚುರುಕು ಕಿವಿ ಪತ್ತೆಹಚ್ಚಿತು- ಕಣಿವೆಯ ಮೂಲೆಯಲ್ಲೆಲ್ಲೋ ಜೆ.ಸಿ.ಬಿ. ಸದ್ದು !? ಲಟಲಟನೆ ಮರವ ಮುರಿದು ಒಡಲ ಬಗೆವ ಸದ್ದು !! ಮಣ್ಣು ತುಂಬಿದ ಟಿಪ್ಪರಿನ ಹಾರ್ನಿಗೆ ಕಾಜಾಣವೊಂದು ಬೆದರಿ ಹಾರಿತು- ಮತ್ತೆ ಬರದ ಶಪಥದೊಂದಿಗೆ,., ಕಾಂಟ್ರಾಕ್ಟು-ರೆಸಾರ್ಟುಗಳ ನೋಟಿನಾಸೆಗೆ ನೆಲವೂ ನಡುಗಿತು... .... ಕ್ರಾಂತಿ ಇನ್ನು ಆರಂಭವಾಗಬೇಕಷ್ಟೇ...!? ಗಿಲೋಟಿನಿನ ನೆನಪಾಗಿ ಗುಡ್ಡ ಇಳಿದು ನಡೆದೆ,....         - ಜಾನ್ ಸುಂಟಿಕೊಪ್ಪ .