Posts

Showing posts from 2019

ಬೆಳದಿಂಗಳ ಹನಿಗಳು

1 ಅಮವಾಸ್ಯೆಯ ಕತ್ತಲಾದ ಕೂಸು ಬೆಳದಿಂಗಳಾಗಿ ಮತ್ತೆ ಹುಟ್ಟಿದ್ದಾಳೆ ಬತ್ತಿ ಹೋದ ಕಂಗಳಲ್ಲಿಂದು ಆನಂದಬಾಷ್ಪ; * 2 ಕನಸುಗಳು ಕಳೆದು ಹೋಗಿದ್ದವು ಮಣ್ಣ ಕಣಕಣದಲ್ಲೂ ಮೊಣಕಾಲೂರಿ ತಡಕಾಡಿದ್ದೆವು, ಇಗೋ ಮತ್ತೆ ಮಡಿಲು ಸೇರಿದ್ದಾಳೆ! 3 ಲೇಬರ್ ವಾರ್ಡಿನ ಮುಂದೆ ಬಸಿರ ನೋವನನ್ನನುಭವಿಸುತ್ತಿದ್ದೆ ಮಗಳು ಮತ್ತೆ ಹುಟ್ಟಿ ಬಂದಳು ಜತೆಗೆ ನಾನೂ ಕೂಡಾ! 4 ತಂಗಿಯೇ ಬೇಕೆಂದು ಹಟಕ್ಕೆ ಬಿದ್ದ ಮುದ್ದುಮಗಳಿಗೆ ಇದೀಗ ಗೆದ್ದ ಸಂಭ್ರಮ ಬಹುಶಃ ತಂಗಿ ಮಾತು ಕೊಟ್ಟಿರಬೇಕೇನೋ; * 5 ನಿರೀಕ್ಷೆ ಎಂದರೇನು? ಕನಸು ಬಸಿರಾಗುವುದು ಬಸಿರು ಉಸಿರಾಗುವುದು ಮತ್ತು ಉಸಿರು ನನಸಾಗುವುದು 6 ಕಂಗಾಲಾಗಿದ್ದ ಹೆಂಡತಿಗೆ ನವಮಾಸವೂ ಆತಂಕವೇ ಇದೀಗ ತಾಯಿ ಮಗುವಾಗಿದ್ದಾಳೆ ಮತ್ತು ಮಗು ತಾಯಿಯ ತಾಯಿ; - ಜಾನ್ ಸುಂಟಿಕೊಪ್ಪ . posted from Bloggeroid

ಒಂದು ಕಾರು ಮತ್ತೊಂದಿಷ್ಟು ಜೀವನಾನುಭವ

ನಿನ್ನೆ ಬಿ.ಇ.ಓ.ರವರ ಸಭೆಯಲ್ಲಿದ್ದಾಗಲೇ ಪತ್ನಿ ಆಸ್ಪತ್ರೆ ಸೇರಿರುವ ಸುದ್ದಿ ಕೇಳಿ ಆತುರಾತುರವಾಗಿ ಮನೆ ಸೇರಿ ಲಗೇಜು ಹೊಂದಿಸಿ ಬಸ್ಸತ್ತಿ ಬಾಳುಪೇಟೆ ತಲುಪುವಾಗಲೇ ಸೂರ್ಯ ತಣ್ಣಗೆ ಮುಳುಗಲು ಹೊರಟು ಬ...

ಒಂದು ಹಾಡು

ಅಂತರಂಗ ಹರಿದಿದೆ ಹೇಗೆ ತಾಳಲಿ ಅಂಧಕಾರ ಕವಿದಿದೆ ಹೇಗೆ ಸಾಗಲಿ ಹೃದಯ ಚೂರಾಗಿದೆ ಬದುಕು ಗೋಳಾಗಿದೆ ಹೇಗೆ ಹೇಳಲಿ.. //2// ಈ ಜೀವನ ಸುಳಿಗಾಳಿಗೆ ಚದುರಿದ ಮೋಡ ಪ್ರತಿ ಹೆಜ್ಜೆಯೂ ವಿಧಿಯಾಟದ ಕುಹಕದ ನೋಟ ಹೇಗೆಹೇ...