ಪ್ರಾಣ

ಎಲ್ಲೋ ಕಳೆದುಹೋದಂತಿದೆ
ನನ್ನ ಪ್ರಾಣ...

ಆತ್ಮದ ಉಳಿವಿಗಾಗಿ ಹಪಹಪಿಸಿ 
ನ್ಯಾಯ ನೀತಿ ಗಹಗಹಿಸಿ
ಒಳ್ಳೆಯವನಾಗಲು ಬಯಸಿ ಬಯಸಿ
ಮತ್ತಷ್ಟು ಕೆಟ್ಟವನಾದೆ...

ಇರಲಿ,..
ಅದೆಷ್ಟು ನೋವುಗಳ ಉಂಡಿದ್ದೇನೆ
ಕನಸುಗಳ ಕಂಡೂ ಕಂಡೂ ಬರಿದಾಗಿದ್ದೇನೆ
ಪ್ರಾಣವಿಲ್ಲದ ಆತ್ಮ 
ಆತ್ಮವಿಲ್ಲದ ಪ್ರಾಣ ಊಹಿಸಲಾಗುತ್ತಿಲ್ಲ;

ಒಳ್ಳೆಯದಾಗಲಿ...
ಪ್ರಾಣವೂ ಆತ್ಮವೂ ಶಾಶ್ವತವೆಂದು
ಕಂಡವರಾರು?!
ಗಂಟಲು ಬಿಗಿದು 
ಕಣ್ಣು ತುಂಬುವುದು ಮಾತ್ರ ಸತ್ಯ ,..
ಅದಿಲ್ಲದಿದ್ದರೆ ಒಂದು ನಿಟ್ಟುಸಿರು...

ಹೋಗಿ ಬರುತ್ತೇನೆ...

ಛೇ... 
ತಪ್ಪಾಯಿತು..
ಬರುವುದಿನ್ನೆಲ್ಲಿಗೆ
ಹೊರಡುತ್ತೇನೆ...
                       - ಜಾನ್ ಸುಂಟಿಕೊಪ್ಪ


Comments

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****