ಕ್ರಾಂತಿ

ಕಣಿವೆಯ

ಹುಲ್ಲುಗಾವಲಿನಲಿ

ಮಲಗಿದ್ದ ನನಗೆ

ಕನಸಿನಲೂ

ವರ್ಡ್ಸ್ ವರ್ಥ್ ಬರಲಿಲ್ಲ

ಕಾಲರಿಡ್ಜ್ ಕೂಡ ,..

ಎಲ್ಲೋ ಅರಳಿದ

ಡ್ಯಾಫೋಢಿಲ್ ಗಳು

ಹರೆಯ ಬಿರಿದ ಲಿಲ್ಲಿ ಹೂಗಳು

ಘಮವ ಸಾರುತ್ತಿದ್ದವೇನೋ

ನನ್ನ ಮೂಗಿಗೆ ಗುರುತು ಸಿಗುವಷ್ಟರಲ್ಲಿ

ಚುರುಕು ಕಿವಿ ಪತ್ತೆಹಚ್ಚಿತು-

ಕಣಿವೆಯ ಮೂಲೆಯಲ್ಲೆಲ್ಲೋ

ಜೆ.ಸಿ.ಬಿ. ಸದ್ದು !?

ಲಟಲಟನೆ ಮರವ ಮುರಿದು

ಒಡಲ ಬಗೆವ ಸದ್ದು !!

ಮಣ್ಣು ತುಂಬಿದ ಟಿಪ್ಪರಿನ ಹಾರ್ನಿಗೆ

ಕಾಜಾಣವೊಂದು ಬೆದರಿ ಹಾರಿತು-

ಮತ್ತೆ ಬರದ ಶಪಥದೊಂದಿಗೆ,.,

ಕಾಂಟ್ರಾಕ್ಟು-ರೆಸಾರ್ಟುಗಳ ನೋಟಿನಾಸೆಗೆ

ನೆಲವೂ ನಡುಗಿತು... ....


ಕ್ರಾಂತಿ ಇನ್ನು ಆರಂಭವಾಗಬೇಕಷ್ಟೇ...!?

ಗಿಲೋಟಿನಿನ ನೆನಪಾಗಿ

ಗುಡ್ಡ ಇಳಿದು ನಡೆದೆ,....

        - ಜಾನ್ ಸುಂಟಿಕೊಪ್ಪ .

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..