ತಪ್ಪಾಯಿತು ..

ಯಾಕೋ ಹೀಗೆ
ಮೈ ಚಾಚಿಕೊಂಡದ್ದು ತಪ್ಪಾಯಿತು..

ತಲೆಯೊಳಗಿನ ಚಿಂತೆಗಳಿಗೆಲ್ಲಾ
ದಿಂಬಿನೊಡನೆ ವ್ಯವಹಾರವಾಗಿ
ನನ್ನನ್ನು ಆಳದಾಳದ
ನಿದ್ರೆಗೆ ದೂಡಲಾರಂಭಿಸಿದವು;

ನಾನು ಮರೆಯಬಾರದೆಂದು 
ಮತ್ತೆಮತ್ತೆ ಚಪ್ಪರಿಸಿ ನೆನಪಿಸುತ್ತಿದ್ದ
ಬಯಕೆಗಳಿಗೆಲ್ಲಾ ಸದ್ದಿಲ್ಲದ ಸ್ವಾತಂತ್ರ್ಯ ;

ನನಗೆ ನಾನೇ ಹಗುರವಾಗಿ
ಮೋಡವಾಗಿ ತೇಲಿ ತೇಲಿ
ಎಲ್ಲಿ ತಲುಪಿದೆನೆಂಬುದೇ
ನನಗರಿವಿಲ್ಲ..

ಯಾಕೋ ಹೀಗೆ
ಮೈ ಚಾಚಿಕೊಂಡದ್ದು
ತೀರಾ ತಪ್ಪಾಯಿತು..
ಸಾವು ಸಹಜವೋ ಅಸಹಜವೋ
ತಲೆಕೆಡಿಸಿಕೊಳ್ಳುವಂತಾಗಿದೆ..

    - ಜಾನ್ ಸುಂಟಿಕೊಪ್ಪ 

Comments

Post a Comment

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****

ಪ್ರಾಣ