ಕಾಮ್ರೇಡನೊಬ್ಬನ ಸ್ವಗತ
ತಾಯೇ ,,,,.
ನನ್ನ ಬಟ್ಟಲಿಗೊಂದಿಷ್ಟು
ಕ್ರಾಂತಿಯ ಸುರಿ,,,,
ನನ್ನ ಒಡಲಾಳದ
ಬಂಡಾಯದ ಕಿಡಿ
ಹೊತ್ತಿ ಉರಿಯಲಿ
ಒಮ್ಮೆ ನೋಡು,,...
ನನ್ನೊಳಗಿನ ಕಿಚ್ಚು
ಸುಡಲು ಪರಿತಪಿಸುತಿದೆ
ಕೊಳಪೆ ಹಿಡಿದು
ಪೂ,,,.ಪೂ,,,,.ಎಂದು
ಊದಿ ಸಾಕಾದ ಬ್ರೆಕ್ಟ್
ಹೊಗೆಯ ಕಪ್ಪನೇ ದೂರುವ ವಾಲ್ಟೇರ್
ಕಣ್ಣುರಿಯೆನ್ನುತ ಕಾಣೆಯಾಗಿದ್ದಾರೆ ,,.
ನೆತ್ತರ ನೆಕ್ಕಿ ನೆಕ್ಕಿ
ಹಬೆಯಾಡುವ ಆತ್ಮಗಳಿಂದಲೇನೋ
ಆ ಗಿಲೋಟಿನಿಗೇ ತುಕ್ಕು ಹಿಡಿದಿದೆ
ಉಳಿದದ್ದು ನನ್ನ ನಾಲಿಗೆಯಷ್ಟೇ ,,..
ಕಿರುನಾಲಗೆಗೇ ಕುಣಿಕೆ ಬಿಗಿವ ಮುನ್ನ
ನನ್ನ ರುದ್ರಗೊಳಿಸು -
ಬೆಳಕು ಸ್ವತಂತ್ರಗೊಳ್ಳಲಿ ,,..
-ಜಾನ್ ಸುಂಟಿಕೊಪ್ಪ .
Comments
Post a Comment