***** ಮತ್ತೆ ಮತ್ತೆ ಸಮ್ಮಿಲನ *****
ಸರಕಾರಿ ಶಾಲೆಯೆಂದರೆ ಅದೊಂದು ವಿಭಿನ್ನ ಜಗತ್ತು.ಸಿಂಬಳ ಜಾರುವ ಮೂಗು,ಧೂಳು ಮೆತ್ತಿದ ಚಡ್ಡಿ,ಕಣ್ಣ ಆಳದಿಂದೆಲ್ಲೋ ಸದ್ದಿಲ್ಲದೇ ಕೇಳುವ ಅಸಹಾಯ ಆಕ್ರಂದನ,ಛಿಲ್ಲೆನ್ನುವ ಕಣ್ಣೀರು,ಅಪ್ಪ ಯಾರೋ!?ಅಮ್ಮ ಯಾರೋ?! ಅಜ್ಜ-ಅಜ್ಜಿಯರನ್ನೇ ಸರ್ವಸ್ವವೆಂದರಿತ ಪುಟ್ಟ ಹೃದಯ,ಓಡಿ ಹೋದ ಅಮ್ಮನನ್ನೇ ಸದಾ ಹುಡುಕುವ ಕಂಗಳು,,ಗಪ್ಪೆನ್ನುವ ಹೆಂಡ-ಬೀಡಿಯ ವಾಸನೆಯನ್ನು ರಕ್ತಗತವಾಗಿಸಿಕೊಂಡು ನಿರ್ಲಿಪ್ತರಾದ ಎಳೆಯ ಜೀವಗಳು.. ಕಣ್ಣ ಮುಂದೆಯೇ ನಡೆವ ಮಬ್ಬುಗತ್ತಲ ತೂರಾಟಕ್ಕೆ,ಬಡಿದಾಟಕ್ಕೆ,ಕೊಸರಾಟಕ್ಕೆ ಮೂಕಸಾಕ್ಷಿಗಳು,ಚಪ್ಪಲಿಯಿಲ್ಲದ ಕಾಲಿನಲ್ಲೇ ಕುಂಟುಬಿಲ್ಲೆ ,ಜೂಟಾಟ ಆಡಿ ಜಗತ್ತು ಗೆಲ್ಲುವ ಛಲದ ಮಲ್ಲರು,ಕರುಳು ಕಿತ್ತು ತಿನ್ನುವ ಹೊಟ್ಟೆ ಹಸಿವಿದ್ದರೂ ಚೀಪಿ ಚೀಪಿ ಕುಡಿವ ಜಿಗಣೆಗಳಿಗೆ ಉದಾರವಾಗಿ ನೆತ್ತರು ದಾನ ಮಾಡುವ ಅಮಾಯಕರು,.. ಈ ನೋವಿನ-ಹಸಿವಿನ ನಡುವೆಯೂ ಬಾಯಿ ತುಂಬಾ ಗಲಗಲ ನಕ್ಕು ಪಾಠ ಕೇಳುವ ಹೃದಯವಂತ ಜ್ನಾನದ ಕಂದಮ್ಮಗಳು,,,,, ಇದು ಮುಗಿಯೋಲ್ಲ ಕಣ್ರೀ,,,,
ಸರ್ಕಾರಿ ಶಾಲೆಗಳನ್ನು,ಅವುಗಳ ಕಾರ್ಯ ವೈಖರಿಯನ್ನು ಉಡಾಫೆಯಿಂದ ಕಾಣುವ ತಣ್ಣಗಿನ ರಕ್ತದ ಪ್ರಾಣಿಗಳನ್ನು ಕಂಡಾಗೆಲ್ಲಾ ಬೇಸರವಾಗುತ್ತದೆ. ಆದ್ರೆ ಬಹಳಷ್ಟು ಜನರಿದ್ದಾರೆ , ಸುಮ್ಮಗೇ ಕೂತುಬಿಟ್ಟ ಆ ನಾಲ್ಕುನಾಡು ಅರಮನೆಯನ್ನೂ, ಸದಾ ಹಸಿರು ಹೊದ್ದು ತೂಕಡಿಸುವ ತಡಿಯಂಡಮೋಳನ್ನೂ ಕಣ್ತುಂಬಿಸಲು ಬಂದವರು ಒಮ್ಮೆ ಇಣುಕಿ ನೋಡಿ "ಓ,. ಇಲ್ಲೇನೋ ನಡಿತಿದೆ ,,,,,"ಎಂದು ಕೈ ಬೀಸುತ್ತಾರೆ,ಸವಿನಗೆ ಬೀರುತ್ತಾರೆ.,, ಬಿಡುವಾದಾಗ ನಾವೂ ಅವರೊಂದಿಗೆ ಬೆರೆಯುತ್ತೇವೆ,ಅವರ ಪ್ರೀತಿ ಕಾಳಜಿ ನೋಡಿ ಸಧ್ಯ ಮನುಷ್ಯತ್ವ ಇನ್ನೂ ಭೂಮಿ ಮೇಲಿದೆ ಎಂದು ಸಮಾಧಾನವಾಗುತ್ತೆ.ದುಡ್ಡನ್ನೇ ಧರ್ಮ,ಜೀವ,ಉಸಿರು,ಮಣ್ಣು ಮಸಿ ಗೊಬ್ಬರವಾಗಿಸಿಕೊಂಡು ತಮ್ಮ ಸುತ್ತೋಂದು ಪರಿಧಿಯನ್ನೆಳೆದು ಬದುಕುತ್ತಿರೋ ಪ್ರಾಣಿಗಳೆಷ್ಟು ಇವೆಯೋ ಹಾಗೆಯೇ ಹಂಚಿ ಬದುಕುವ ಪ್ರಾಜ್ನರೂ ಇದ್ದಾರೆ.
ಬೆಂಗಳೂರಿನ ದೇವಿನಗರದ ಶ್ರೀ ಗುರುಪ್ರಸಾದ್ ಮತ್ತವರ ಪತ್ನಿ ಶ್ರೀಮತಿ ಪೂರ್ಣಿಮಾ ದಂಪತಿಗಳದ್ದು ನಿಜವಾದ ಬದುಕು.ಇವರ ಪ್ರೀತಿಗೆ ಅದೇಷ್ಟು ನೊಂದ ಹೃದಯಗಳು ಪಾವನವಾಗಿವೆಯೋ ಅವರಿಗಷ್ಟೇ ಗೊತ್ತು ಆದ್ರೆ ನಾವು ನಮ್ಮ ಅಕ್ಕಪಕ್ಕದ ಶಾಲೆಗಳು ಮಾತ್ರ ಕಡೇ ಪಕ್ಷ ಈ ಜನ್ಮದ ಮಟ್ಟಿಗಾದರೂ ಇವರನ್ನು ಮರೆಯುವಂತಿಲ್ಲ.ವಿದ್ಯುತ್ ಸೌಲಭ್ಯವಿಲ್ಲದ ಮಕ್ಕಳಿಗೆ ಸೋಲಾರ್ ದೀಪ, ಎಲ್ಲಾ ಮಕ್ಕಳಿಗೆ ಆರೋಗ್ಯ ಕಿಟ್,ವರ್ಷಕ್ಕಾಗುವಷ್ಟು ನೋಟ್ ಬುಕ್ಕುಗಳು,ಲೇಖನ ಸಾಮಾಗ್ರಿಗಳು, ಮಳೆಗೆ ರೈನ್ಕೋಟು, ಜಿಗಣೆಗೆ ಗಂಬೂಟು. ಶಾಲೆಗಳಿಗೆ ಬೆಲೆಬಾಳುವ ಗ್ರಂಥಾಲಯದ ನೂರಾರು ಪುಸ್ತಕಗಳು,ಆಟದ ಸಾಮಾಗ್ರಿಗಳು,ಕಂಪ್ಯೂಟರ್,ಶೈಕ್ಷಣಿಕ ಪ್ರವಾಸಕ್ಕೆ ಧನಸಹಾಯ ,ವರ್ಷದ ವಿಧ್ಯಾರ್ಥಿಗೆ ಬೆಲೆಬಾಳುವ ಬಹುಮಾನ,,,., ಅಬ್ಬಬ್ಬಾ,,,
ಕೊಳೆಯುವಷ್ಟು ಇದ್ದೂ ಕೇಳಿದರೂ ಒಂದು ಸಹಾಯ ಮಾಡದ ನಮ್ಮ ಜನಗಳ ಮಧ್ಯೆ ಬೇಸರದಿಂದ ದುಡಿಯುತ್ತಿರುವಾಗ ಕೇಳದೇ ಇಷ್ಟೆಲ್ಲಾ ಸಹಾಯ ಮಾಡಿ ಸುಮ್ಮಗೇ ಹೊರಟು ಹೋಗುವ, ಬಿಡುವಾದಗಲೆಲ್ಲಾ ಇವರೇ ತಮ್ಮ ಕರುಳ ಕುಡಿಗಳೆಂಬಂತೆ ಫೋನಾಯಿಸಿ ಕ್ಷೇಮ ವಿಚಾರಿಸುವ,ಸಲಹೆ ನೀಡುವ,,.ನೂರಾರು ತಲೆಬಿಸಿಗಳ ನಡುವೆಯೂ ಬೆಂಗಳೂರೆಂಬ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಮಕ್ಕಳೊಂದಿಗೆ ಸದ್ದಿಲ್ಲದೆ ಹಾಯಾಗಿರುವ ಮಾತೃಹೃದಯಿಗಳನ್ನು ಕಂಡಾಗ ಮಾತು ಬರದಂತಾಗುತ್ತದೆ.ಸರ್ಕಾರಿ ಶಾಲೆಗಳೆಂದರೆ ಸವಾಲಿನ ಕೇಂದ್ರಗಳು ಎಂಬುದನ್ನು ಅರಿತು ನಮಗೆಲ್ಲಾ ಧೈರ್ಯ ತುಂಬುವ ಇಂತಹ ವೀರ್ಯವಂತರು ನಮ್ಮ ದೇಶದ ನಿಜವಾದ ಶಕ್ತಿ,,. ಅವರಿಗಿದೋ ನನ್ನ ನುಡಿನಮನಗಳು,,,.

Tumba dhanyavadagalu ishtu arthapurnavaagi barediruvudakke. Naanu Purnima mattu Guruprasad avarannu hattiradinda balle. E mulaka avaribbarigu nanna namanagalu.
ReplyDeleteTumba dhanyavadagalu ishtu arthapurnavaagi barediruvudakke. Naanu Purnima mattu Guruprasad avarannu hattiradinda balle. E mulaka avaribbarigu nanna namanagalu.
ReplyDeleteThank you madam
ReplyDeleteಹೃದಯವಿದು ಒದ್ದೆ ಒದ್ದೆ.... ಗುರುಪ್ರಸಾದ್ ದಂಪತಿಗಳಿಗೆ ಎದೆಯಾಳದ ಪ್ರಣಾಮಗಳು...

ReplyDelete