ಹಾವು,ಹಕ್ಕಿ ಮತ್ತು ಅಕ್ಕ
>
>
> ಹೊಸ ವರುಷದ ದಿನ
>
>
> ಮನೆಗೆ ಅಕ್ಕ ಬಂದಾಗಿತ್ತು
>
> ಸೂಟುಕೇಸಿನೊಂದಿಗೇ...!
>
>
> * * * * * *
>
>
> ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು
>
> ಸವರುತ್ತಾ ಹತ್ತಿದ ಹಾವು
>
> ಪೊರೆ ಕಳಚುತ್ತಿತ್ತು...
>
> ಧಾವಂತದಿಂದ ನಾನು ಓಡಿದ್ದೇ ಓಡಿದ್ದು,
>
> ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು,
>
> ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ-
>
> 'ದೂರ ಹೋಗೋ..ಮುಟ್ಟಬ್ಯಾಡ,,,'
>
> ಅಕ್ಕ ಅರಚಿದಳು,
>
> ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ!
>
>
>
> * * * * *
>
>
>
> ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ,
>
> ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ,
>
> ಇಬ್ಬರದೂ ಎಂತಹ ಸಂಧಾನವೋ ಕಾಣೆ
>
> ಅಕ್ಕ ತೆರೆದ ಬಾಗಿಲಲೇ
>
> ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು
>
>
> * * * * * *
>
>
>
> ನೆತ್ತಿಗೇರಿದ ಪಿತ್ತದೊಂದಿಗೇ
>
> ಅಕ್ಕಳ ಹುಡುಕಿದೆ
>
> ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು,
>
> 'ಹಕ್ಕಿಯಂತೆ ಹಾರುವುದು ಹೇಗೆ!?
>
>
>
>
>
>
> ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ
>
>
> ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ.
>
> ಹೊಸ ವರುಷದ ದಿನ
>
>
> ಮನೆಗೆ ಅಕ್ಕ ಬಂದಾಗಿತ್ತು
>
> ಸೂಟುಕೇಸಿನೊಂದಿಗೇ...!
>
>
> * * * * * *
>
>
> ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು
>
> ಸವರುತ್ತಾ ಹತ್ತಿದ ಹಾವು
>
> ಪೊರೆ ಕಳಚುತ್ತಿತ್ತು...
>
> ಧಾವಂತದಿಂದ ನಾನು ಓಡಿದ್ದೇ ಓಡಿದ್ದು,
>
> ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು,
>
> ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ-
>
> 'ದೂರ ಹೋಗೋ..ಮುಟ್ಟಬ್ಯಾಡ,,,'
>
> ಅಕ್ಕ ಅರಚಿದಳು,
>
> ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ!
>
>
>
> * * * * *
>
>
>
> ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ,
>
> ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ,
>
> ಇಬ್ಬರದೂ ಎಂತಹ ಸಂಧಾನವೋ ಕಾಣೆ
>
> ಅಕ್ಕ ತೆರೆದ ಬಾಗಿಲಲೇ
>
> ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು
>
>
> * * * * * *
>
>
>
> ನೆತ್ತಿಗೇರಿದ ಪಿತ್ತದೊಂದಿಗೇ
>
> ಅಕ್ಕಳ ಹುಡುಕಿದೆ
>
> ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು,
>
> 'ಹಕ್ಕಿಯಂತೆ ಹಾರುವುದು ಹೇಗೆ!?
>
>
>
>
>
>
> ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ
>
>
> ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ.
Comments
Post a Comment