ಭಯ
ನೀರಿಗೆ ಎಸೆದ ಚಪ್ಪಟೆ ಕಲ್ಲು
ಅವಸರವಸರವಾಗಿ
ಕೊಳದ ಗಡಿ ದಾಟಿದ್ದು ಕಂಡು
ಹೃದಯ ಕಸಕ್ಕೆಂದಿತು !
ಪಕ್ಕದ ಮನೆಯ ಹಸುಗೂಸು
ಒಂದೇ ಸಮನೆ ಅಳುತ್ತಿದೆ;
ಜಗತ್ತಿನ ಕೊಳದಲ್ಲಿ ಇನ್ನೊಂದು ಕಲ್ಲು
ಇಳಿದು ಬರುವುದ ಚಿಂತಿಸಿಯೇ
ಹೃದಯ ಮೊಣಕಾಲೂರಿತು.
ಕೊಳದಲ್ಲಿ ಎದ್ದು ನಿಂತ ಅಲೆಗಳ ಮೇಲೆ
ಇದೀಗ
ಸೂರ್ಯನ ಕಿರಣಗಳ 'ಜಮಾಅತ್' ಆರಂಭವಾಗಿದೆ.
ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ.
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ.
ಅವಸರವಸರವಾಗಿ
ಕೊಳದ ಗಡಿ ದಾಟಿದ್ದು ಕಂಡು
ಹೃದಯ ಕಸಕ್ಕೆಂದಿತು !
ಪಕ್ಕದ ಮನೆಯ ಹಸುಗೂಸು
ಒಂದೇ ಸಮನೆ ಅಳುತ್ತಿದೆ;
ಜಗತ್ತಿನ ಕೊಳದಲ್ಲಿ ಇನ್ನೊಂದು ಕಲ್ಲು
ಇಳಿದು ಬರುವುದ ಚಿಂತಿಸಿಯೇ
ಹೃದಯ ಮೊಣಕಾಲೂರಿತು.
ಕೊಳದಲ್ಲಿ ಎದ್ದು ನಿಂತ ಅಲೆಗಳ ಮೇಲೆ
ಇದೀಗ
ಸೂರ್ಯನ ಕಿರಣಗಳ 'ಜಮಾಅತ್' ಆರಂಭವಾಗಿದೆ.
ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ.
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ.
Comments
Post a Comment