ಒಂದು ನಿಟ್ಟುಸಿರು

ಈಗ 
ಏನೂ ಅಲ್ಲದವನಾಗುವುದೆಂದರೆ ಏನರ್ಥ?!

ಕತ್ತಲು ಕರಗಿ
ಬೆಳಗು ಅರಳಿ
ಅಣುರೇಣುತೃಣಕಾಷ್ಟಗಳಲೂ
ನಾನು ಕಿರಣವಾಗಿದ್ದೆ ;

ಲಜ್ಜೆಯನೇ ಮೈತುಂಬಿಕೊಂಡಾಗ
ಬೆತ್ತಲುತನವನು ಹೊದ್ದುಕೊಂಡು
ನಿನ್ನೊಳಗೂ ಹೊರಗೂ
ಮೇಘವಾಗಿದ್ದೆ,... ಮಳೆಯಾಗಿದ್ದೆ
ಮತ್ತೆ   ಈಗ...
ಏನೂ ಅಲ್ಲದವನಾಗುವುದೆಂದರೆ..

ಇರಲಿ ಬಿಡು..
ನಿನ್ನೊಳಗಿನ ನನ್ನ ಪಿಸುಮಾತುಗಳೆಲ್ಲಾ 
ಮೌನವಾಗಲಿ ಬಿಡು;
ಮತ್ತೆ ನಾನು... ?!
ಇಲ್ಲವಾಗಿ ಬಿಡುತ್ತೇನೆ
ನಿನ್ನೊಳಗೆ ಹೇಗೋ
ನನ್ನೊಳಗೂ ಕಾಣೆಯಾಗಿ ಬಿಡುತ್ತೇನೆ 
ಹೇಗೂ...
ನಾನೂ ಏನೂ ಅಲ್ಲದವನು ;

               - ಜಾನ್ ಸುಂಟಿಕೊಪ್ಪ 

Comments

  1. ಎಲ್ಲಾ ಇದ್ದೂ... ಏನೂ ಅಲ್ಲದಂತಿರುವವರು 🙏💐

    ReplyDelete

Post a Comment

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****

ಪ್ರಾಣ