ನಿಟ್ಟುಸಿರು

ಭಾರವಾದ ಹೃದಯವೊಂದು
ಮೆತ್ತನೆಯ ಭುಜಕ್ಕೆ 
ಸದ್ದಿಲ್ಲದೆ ಆತುಕೊಂಡಿತು;
ನರಳುತ್ತಾ ನರಳುತ್ತಾ
ಮುಗುಮ್ಮಾಗಿಸುತ್ತಿದ್ದ ಚಿಂತೆಗಳಿಗೆಲ್ಲಾ
ನಿಟ್ಟುಸಿರಿನ ಸಾಂತ್ವಾನ;


ಈಗೀಗ ನನಗೆ ತುಂಬಾ ಚಿಂತೆ
ತಿರುವಿ ಹಾಕಿದ ಪುಟದಂತೆ
ಹಾದುಹೋದ ಹೆಜ್ಜೆಯಂತೆ
ಕಂಡೂಕಾಣದಂತಾಗುವ ಕನಸಿನಂತೆ
ನಾನು ಆಗುತ್ತಿದ್ದೀನೇನೋ ಎಂಬ ಭಯ;


ಹೋಗಲಿ ಬಿಡು..
ಕನಸಿನಲ್ಲಾದರೂ ಕಾಡಿ ಹೋಗುತ್ತೀಯಲ್ಲಾ,
ಅದೂ ಇಲ್ಲವಾದರೆ..!?
ಛೆ..ಹಾಗೇನಾಗಲಿಕ್ಕಿಲ್ಲ
ಕನಸಿಗೇನಿದೆ ಕಟ್ಟುಪಾಡು 
ನೀರವತೆ ತುಂಬಿದ ಕತ್ತಲಿನಲ್ಲಿ
ಬೆಳದಿಂಗಳು ಅರಳಿದಂತೆ,
ಇಂದೂ ಬರುವೆ ತಾನೇ...





Comments

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****

ಪ್ರಾಣ