ಒಂದು ಸಮಾಧಿಯ ಕಥೆ

ಅವಳೆಂದರೆ

ಅವನಿಗಿಷ್ಟ

ಬಹುಶಃ

ಅವಳಿಗೂ ಕೂಡಾ,,,


ಅಲೆ ಅಲೆಯಾಗಿ

ಹನಿವ ಹಸಿವು

ಸೊಬಗು ಹೆಚ್ಚಿಸೋ ಒಲವು

ಹತ್ತಿರವಾಗಿಸಿದ್ದವು, ಬೆಚ್ಚಗಾಗಿಸಿದ್ದವು ,.



ಈಗ



ಅವನಿಲ್ಲ

ಅವನ ಬೆವರನು

ಮಣ್ಣ ವಾಸನೆಗೆ ಬೆರೆಸಿ

ಬೆಚ್ಚಗೆ ಹೊದ್ದು

ಅವಳೀಗ ಶಾಶ್ವತವಾಗಿ ಮಲಗಿದ್ದಾಳೆ


ಬಹುಶಃ

ಆಸುಪಾಸಿನ ಗಾಳಿಯಲಿ

ಇನ್ನೂ ಅವನ ಬೆವರಿದೆ.,.

         - ಜಾನ್ ಸುಂಟಿಕೊಪ್ಪ .

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..