ಕಲ್ಲು ಕರಗುವ ಸಮಯ
ನನ್ನ ಪ್ರಾಯ 30 ವರ್ಷ.ಬಾಲ್ಯದಿಂದಲೂ ಅಕ್ಷರಗಳ ಸಹವಾಸದಲಿ ಬೆಳೆದವನು ನಾನು.ದಟ್ಟವಾದ ಕಾಫಿತೋಟಗಳ ಗವ್ವೆನ್ನುವ ಏಕಾಂತದಲಿ.ಮನುಷ್ಯರ ಒಡನಾಟವೇ ಇಲ್ಲದ ಜಗತ್ತಿನಲ್ಲಿ , ಮೇಲು-ಕೀಳಿನ ತೀರದಲ್ಲೇ ಅಪ್ಪಟ ಗೆಳೆಯರಾದದ್ದು ಬರೇ ಪುಸ್ತಕಗಳು. ಅಪ್ಪನ ಓದುವ ಹುಚ್ಚಿಗೆ ಜತೆಗಾರನಾಗಿ ಇಡೀ ಜಗತ್ತನ್ನು ಪಕ್ಕದಲ್ಲಿ ಕೂರಿಸಿಕೊಂಡ ಭೂಪ ನಾನು.ಆದರೆ ಬಸೂ ಸರ್ ರವರ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ಪುಸ್ತಕದಷ್ಟು ಯಾವುದೂ ನನ್ನನ್ನು ಪ್ರಭಾವಿಸಲಿಲ್ಲ . ದಟ್ಟವಾಗಿ ಹರಡಿದ ಈ ಕಾಫಿತೋಟಗಳಲ್ಲಿ ಒಬ್ಬೊಬ್ಬ ವ್ಯಕ್ತಿಯೂ ಒ಼ದೊಂದು ದ್ವೀಪದಂತೆ . ಬಹುಶಃ ನನ್ನ ಅಪ್ಪ ಸಾಯುವ ಮುನ್ನ ಈ ಪುಸ್ತಕವನ್ನು ಓದಿದ್ದರೆ ಅವರ ಸಾವಿಗೆ ಇನ್ನಷ್ಟು ಸಾರ್ಥಕತೆ ಇರುತ್ತಿತ್ತೇನೋ ....

ಕವಿತೆಗಳ ಜಗತ್ತಿನಲ್ಲಿ ನಾನೂ ಸುತ್ತು ಹಾಕಿದ್ದೇನೆ, ಸಾಹಿತ್ಯದ ಎಲ್ಲಾ ಪ್ರಕಾರಗಳ ಮೂಲೆ ಮೂಲೆಗೆ ಹೋಗಿ ಅನ್ಯಮನಸ್ಕನಾಗಿ ತೆಪ್ಪಗೆ ಕೂತು ಒ಼ದು ದೊಡ್ಡ ನಿಟ್ಟುಸಿರನು ಬಿಟ್ಟಿದ್ದೇನೆ.ಆದರೆ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ನನ್ನ best ಪುಸ್ತಕ. ಇದರ ಸಾಲುಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ನನಗಿದರ ಅರಿವಿಲ್ಲ.. ಪ್ರತಿ ಬಾರಿ ನೋವಾದಾಗ , ನಲಿವಾದಾಗ , ಅವಮಾನವಾದಾಗ ಸುಮ್ಮಗೆ ಕೂತು ಈ ಪುಸ್ತಕದೊಳಗೆ ನುಸುಳಿಬಿಡುತ್ತೇನೆ ಆ ಸಾಲುಗಳು ನನಗೆ ಅಷ್ಟರಮಟ್ಟಿಗೆ ಆಪ್ತವಾಗಿ ಬಿಟ್ಟಿದೆ . ಈ ಸಾಲುಗಳು ಇಷ್ಟರ ಮಟ್ಟಿಗೆ ಕಾಡಲು ಕಾರಣವೇನೆಂದು ಬಹಳ ಸಲ ನನ್ನನ್ನು ನಾನೇ ಕೇಳಿಕೊ಼ಡಿದ್ದೇನೆ. ಅಪ್ಪಟ ಸ್ವಾರ್ಥ ಜಗತ್ತಿನಲ್ಲಿ ಪ್ರಾಮಾಣಿಕತೆಯನ್ನು ಕಾಲಬುಡಕ್ಕೆ ಹಾಕಿ ಬದುಕುವ ಈ ಕಾಲದಲ್ಲಿ ಬಸೂ ಸರ್ ತಮ್ಮ ಕವಿತೆಗಳ ಮೂಲಕ ಈ ಬದುಕಿಗೆ ಆಶಾವಾದ ಮೂಡಿಸುತ್ತಾರೆ.ಎದೆಯಾಳದಲ್ಲಿ ಎಂದೂ ಆರದ ಅಗ್ನಿಕುಂಡವೇ ಉರಿಯುತ್ತಿದ್ದರೂ , ನರನಾಡಿಗಳಲ್ಲಿ ನೋವು , ನಿ಼ದೆ ಅವಮಾನಗಳೇ ಉಕ್ಕಿ ಹರಿದರೂ ಅವರ ನೋಟ-ಮಾತಿನಲ್ಲಿ ಸಿಗುವ ಆತ್ಮೀಯತೆ ಅಪಾರ. ಈ ಆತ್ಮೀಯತೆಯ ಹ಼ಂಬಲದಲಿ ಮಗುವಿನಷ್ಟು ಮುಗ್ಧರಾಗಿಬಿಡುವುದು ನೋವಿನಲ್ಲೂ ನಸುನಗುವುದು ನನಗೆ ಹೃದಯದಲ್ಲಿ ಬೆಚ್ಚಗಿನ ಭಾವನೆ ಮೂಡಿಸುತ್ತದೆ. ಸಾಹಿತ್ಯವೆ಼ಬ ಕಣ್ಣು ಕೋರೈಸೋ ಪ್ರಚಂಡ ಶಕ್ತಿಯ ಮುಂದೆ ಧೂಳಿಗಿ಼ತ ಅಲ್ಪನಾದ ನನ್ನನ್ನು ಗೆಳೆಯನ಼಼ತೆ,ಗುರುವಿನಂತೆ, ತಂದೆಯಂತೆ ಕೈಹಿಡಿದು ಮುನ್ನಡೆಸುವುದು ಬಸೂರವರ ಪ್ರೀತಿಯ ಮಾತು ಮತ್ತು ಅವರ ಕವಿತೆಗಳು. ನನಗೆ ಪ್ರೀತಿ -ಪ್ರೇಮದ ಅಮಲೇರಿಸಿಕೊಂಡು ಸಾಹಿತ್ಯದ ಬೀದಿ ಬೀದಿಗಳಲ್ಲಿ ಅಲೆವ ಮನಸ್ಸಿಲ್ಲ ಏಕೆಂದರೆ ನನ್ನ ದಾರಿಯ ಆಸುಪಾಸಿನಲ್ಲೆಲ್ಲಾ ಅನ್ಯಾಯದ ವಿಷಾನಿಲವನ್ನೇ ಸದ್ದಿಲ್ಲದೆ ಉಸಿರಾಡುವ ಜನರಿದ್ದಾರೆ. ಬಸೂರವರ ಕವಿತೆಗಳನ್ನು ಪ್ರಸ್ತಾಪಿಸ ಬಯಸುವಾಗಲೆಲ್ಲಾ ನನಗೆ ಭಯವಾಗುತ್ತದೆ.ಇಡೀ ಪುಸ್ತಕದ ಒಂದೊಂದು ಕವಿತೆಯೂ , ಒ಼ದೊಂದು ಸಾಲೂ, ಪ್ರತಿಮೆಯೂ ನನ್ನಲ್ಲಿ ರಕ್ತವಾಗಿ ಪ್ರವಹಿಸುತ್ತಿರುವಾಗ ಯಾವುದನ್ನು ಉದಾಹರಿಸಲಿ?! ಯಾವುದನ್ನು ಆವಾಹಿಸಿಕೊಳ್ಳಲಿ ?! ಒಂದು ಮಾತ಼಼ತೂ ಸತ್ಯ ಬದುಕಿನ ಉಚ್ವಾಸ-ನಿಚ್ವಾಸಗಳಲ್ಲಿ ಕರಗದ ಯಾವೊಬ್ಬ ಮನುಷ್ಯನೂ ಕವಿಯಾಗಲಾರ,,.ಪುಸಪುಸನೆ ಹೃದಯದ ಕವಾಟದೊಳಗೆ ಹರಿವ ನೆತ್ತರನು ತೇಯ್ದು ತೇಯ್ದು ಕಣ್ಣೀರನು ಆವಿಯಾಗಿಸಿ ಮಗುವಿನಷ್ಟು ನಿಶ್ಕಲ್ಮಶನಾಗಿರಬಲ್ಲ ಕವಿ ಮಾತ್ರ ದ಼಼ತಕತೆಯಾಗಬಲ್ಲ ಮತ್ತು ಆ ದಿಗ್ಗಜ ನಮ್ಮ ಬಸೂ ಅಲ್ಲದೆ ಇನ್ನಾರಾಗಲು ಸಾಧ್ಯ ....!?

Comments
Post a Comment