***** ವೃಣ *****

ನನ್ನೊಳಗಿನ ವೃಣದ ನೋವೆಲ್ಲಾ

ಹಾಡಾಗಿ ಹೊರಹೊಮ್ಮಿದೆ;


ಆ ಹಾಡು


ವಿಷಾದವಾಗಿ ರಾಗ ಮೀರಿ


ಗೋಡೆಗೋಡೆಗಳಲೂ ಸೂತಕ,


ಕಿಟಕಿ ಬಾಗಿಲುಗಳ ತುಂಬಾ ಅನುಕಂಪ;





ನನ್ನೊಳಗಿನ ವೃಣದ ತುಂಬಾ


ಸಾವು-ಬದುಕಿನ ಚರ್ಚೆ,,,


ದೇಹ ತುಂಬಾ ನೋವಂತೆ


ಆತ್ಮಕ್ಕೆಲ್ಲಿದೆ ಚಿಂತೆ,,,,




ಇದೀಗ,,,

ನಾನು ಆತ್ಮವೆಂದು ಅರಿತು


ವೃಣಗಳನ್ನೆಲ್ಲಾ ಹಣತೆಯಾಗಿಸುತ್ತಿದ್ದೇನೆ,


ಆ ಹಣತೆಯಿಂದೊಮ್ಮುವ ಕಾಂತಿ


ಕಿಟಕಿ ಬಾಗಿಲುಗಳ ಸಂತೈಸಬೇಕಿದೆ,,,,

ಬದುಕನ್ನು ಬೆಳಗಿಸಬೇಕಿದೆ,,,..

- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..