ನಾನೇನು ಕೊಂಡೊಯ್ಯಲಿ
ಇವನದ್ದು ಹೊಸ ಬಂಗಲೆಯಾಯಿತೆಂದು
ಅವನು ಹೊಸ ಗಾಡಿ ಕೊಂಡ
ಅದಕ್ಕೇ ಮತ್ತೆ..
ನಾನೂ ಆರಂಭಿಸಿದೆ
ಬಾಚಿಕೊಳ್ಳಲು - ತುಂಬಿಸಿಕೊಳ್ಳಲು;
ಅವನೊಬ್ಬ ದೇಶ ಸುತ್ತಿದನೆಂದು
ಇವನು ವಿದೇಶಕ್ಕೇ ಹಾರಿಬಿಟ್ಟ
ಅದಕ್ಕೇ ಮತ್ತೆ..
ನಾನೂ ಆರಂಭಿಸಿದೆ
ಸುತ್ತಲು - ಮೇಯಲು;
ಇವನು ಗೋಡೆಗೆ ಸುಣ್ಣ ಬಿಳಿದನೆಂದು
ಅವನು ತಡೆಗೋಡೆಗೂ ಬಣ್ಣ ಬಳಿದುಬಿಟ್ಟ
ಅದಕ್ಕೇ ಮತ್ತೆ,..
ನಾನೂ ಆರಂಭಿಸಿದೆ -
ಊಸವರಳ್ಳಿಯಂತೆ
ಬಣ್ಣ ಬದಲಾಯಿಸಲು;
ಅವರು ಮಾಡಿದ್ದೆಲ್ಲ
ನನಗೂ ಮಾಡಬೇಕೆನ್ನಿಸುವಾಗ
ಅವನು ಸತ್ತ
ಇವನೂ ಸತ್ತ
ಇದೀಗ ನನ್ನ ಸರದಿ
ಆದರೆ,..
ನನಗೀಗ ಚಿಂತೆ
ಅವರೆಲ್ಲ ಬಿಟ್ಟೇ ಹೋದರು
ನಾನೇನು ಕೊಂಡೊಯ್ಯಲಿ !?
ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ , ಮುಂಬಯಿ
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ
ಸೂಪರ್ ಸರ್
ReplyDelete