ತಾಯೇ ,,,,. ನನ್ನ ಬಟ್ಟಲಿಗೊಂದಿಷ್ಟು ಕ್ರಾಂತಿಯ ಸುರಿ,,,, ನನ್ನ ಒಡಲಾಳದ ಬಂಡಾಯದ ಕಿಡಿ ಹೊತ್ತಿ ಉರಿಯಲಿ ಒಮ್ಮೆ ನೋಡು,,... ನನ್ನೊಳಗಿನ ಕಿಚ್ಚು ಸುಡಲು ಪರಿತಪಿಸುತಿದೆ ಕೊಳಪೆ ಹಿಡಿದು ಪೂ,,,.ಪೂ,,,,.ಎಂದು ಊದಿ ಸಾಕಾದ...
ನನ್ನ ಪ್ರಾಯ 30 ವರ್ಷ.ಬಾಲ್ಯದಿಂದಲೂ ಅಕ್ಷರಗಳ ಸಹವಾಸದಲಿ ಬೆಳೆದವನು ನಾನು.ದಟ್ಟವಾದ ಕಾಫಿತೋಟಗಳ ಗವ್ವೆನ್ನುವ ಏಕಾಂತದಲಿ.ಮನುಷ್ಯರ ಒಡನಾಟವೇ ಇಲ್ಲದ ಜಗತ್ತಿನಲ್ಲಿ , ಮೇಲು-ಕೀಳಿನ ತೀರದಲ್ಲೇ ಅಪ್ಪಟ ಗೆಳೆಯರಾದದ್ದು ಬರೇ ಪುಸ್ತಕಗಳು. ಅಪ್ಪನ ಓದುವ ಹುಚ್ಚಿಗೆ ಜತೆಗಾರನಾಗಿ ಇಡೀ ಜಗತ್ತನ್ನು ಪಕ್ಕದಲ್ಲಿ ಕೂರಿಸಿಕೊಂಡ ಭೂಪ ನಾನು.ಆದರೆ ಬಸೂ ಸರ್ ರವರ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ಪುಸ್ತಕದಷ್ಟು ಯಾವುದೂ ನನ್ನನ್ನು ಪ್ರಭಾವಿಸಲಿಲ್ಲ . ದಟ್ಟವಾಗಿ ಹರಡಿದ ಈ ಕಾಫಿತೋಟಗಳಲ್ಲಿ ಒಬ್ಬೊಬ್ಬ ವ್ಯಕ್ತಿಯೂ ಒ಼ದೊಂದು ದ್ವೀಪದಂತೆ . ಬಹುಶಃ ನನ್ನ ಅಪ್ಪ ಸಾಯುವ ಮುನ್ನ ಈ ಪುಸ್ತಕವನ್ನು ಓದಿದ್ದರೆ ಅವರ ಸಾವಿಗೆ ಇನ್ನಷ್ಟು ಸಾರ್ಥಕತೆ ಇರುತ್ತಿತ್ತೇನೋ .... ಕವಿತೆಗಳ ಜಗತ್ತಿನಲ್ಲಿ ನಾನೂ ಸುತ್ತು ಹಾಕಿದ್ದೇನೆ, ಸಾಹಿತ್ಯದ ಎಲ್ಲಾ ಪ್ರಕಾರಗಳ ಮೂಲೆ ಮೂಲೆಗೆ ಹೋಗಿ ಅನ್ಯಮನಸ್ಕನಾಗಿ ತೆಪ್ಪಗೆ ಕೂತು ಒ಼ದು ದೊಡ್ಡ ನಿಟ್ಟುಸಿರನು ಬಿಟ್ಟಿದ್ದೇನೆ.ಆದರೆ "ಬಟ್ಟೆಯೆ಼ಬುದು ಬೆ಼ಕಿಯ ಹಾಗೆ " ನನ್ನ best ಪುಸ್ತಕ. ಇದರ ಸಾಲುಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ನನಗಿದರ ಅರಿವಿಲ್ಲ.. ಪ್ರತಿ ಬಾರಿ ನೋವಾದಾಗ , ನಲಿವಾದಾಗ , ಅವಮಾನವಾದಾಗ ಸುಮ್ಮಗೆ ಕೂತು ಈ ಪುಸ್ತಕದೊಳಗೆ ನುಸುಳಿಬಿಡುತ್ತೇನೆ ಆ ಸಾಲುಗಳು ನನಗೆ ಅಷ್ಟರಮಟ್ಟಿಗೆ ಆಪ್ತವಾಗಿ ಬಿಟ್ಟಿದೆ . ಈ ಸಾಲುಗಳು ಇಷ್ಟರ ಮಟ್ಟಿಗೆ ಕಾಡಲು ಕಾರಣವೇನೆಂದು ಬಹಳ ಸಲ ನನ್ನನ್...
ನೀನು ಮಲಗಿಯಾದ ಮೇಲೆ ನಾನು ಎಚ್ಚರಗೊಂಡೆ, ನಿನ್ನ ಕನಸಿನ ಆಳದಾಳಕ್ಕೂ ನನ್ನ ಹೃದಯ ಈಜಾಡುತ್ತಿತ್ತು .. ನೀನು ಹೊದ್ದ ಹೊದಿಕೆಯ ತುಂಬಾ ನನಗರಿವಿತ್ತು, ನಿನ್ನ ಅದುರುವಿಕೆಯಿಂದ ನನಗಿದರ ಅರಿವಾಯಿತು ,. ನೀನು ಬಲ್ಲೆಯಾ?! ನಾನು ಯಾರು !? ಶತ ಶತಮಾನಗಳಿಗೂ ಲೆಕ್ಕ ಸಿಗಲಿಲ್ಲ ಐನ್ ಸ್ಟಿನ್ ಡಾರ್ವಿನ್ ಸಾಕ್ರೆಟಿಸ್ ರಿಗೂ ಹುಚ್ಚು ಹೊಳೆಯಲಿಲ್ಲ ಪೆರುವಿನ ಗಿರಿಗಳ ತುತ್ತತುದಿಯ ಆಳದಲ್ಲೂ ... ಈಜಿಪ್ಟಿನ ಪಿರಮಿಡ್ ಗಳ ಗುಪ್ತತೆಯ ಬಯಲಲೂ ,,, ನೀನಿರಲಿಲ್ಲ ನಾನಿದ್ದೆ ,.?! ಭಯವಾಗಿ ಭಕ್ತಿಯಾಗಿ ಶಕ್ತಿಯಾಗಿ ಈಗಲೂ ಇದ್ದೇನೆ - ನಿರ್ಜೀವ ಧರ್ಮಗಳಲ್ಲಿ ಕೈಲಾಗದ ಮೂರ್ತಿಗಳಲ್ಲಿ. ನನಗೆ ಭಯವಿದೆ - ನನ್ನ ವ್ಯಾಲಿಡಿಟಿಯ ಬಗ್ಗೆ ಸಂಚುಹೂಡುವ ಭೂಗತ ಬಿಗ್ ಬ್ಯಾಂಗ್ ಗಳ ಬಗ್ಗೆ ಅಂತರಿಕ್ಷದ ಆಳಅಗಲ ಬಗೆವ ಬೇಟೆನಾಯಿ ಉಪಗ್ರಹಗಳ ಬಗ್ಗೆ .,. ವ್ಯಾಪಾರ ಕಡಿಮೆಯಾದರೇನಂತೆ ಮುಂದೇನಾದೀತೋ ಕಾದುನೋಡಬೇಕು ,., - ಜಾನ್ ಸುಂಟಿಕೊಪ್ಪ.
ಕಣಿವೆಯ ಹುಲ್ಲುಗಾವಲಿನಲಿ ಮಲಗಿದ್ದ ನನಗೆ ಕನಸಿನಲೂ ವರ್ಡ್ಸ್ ವರ್ಥ್ ಬರಲಿಲ್ಲ ಕಾಲರಿಡ್ಜ್ ಕೂಡ ,.. ಎಲ್ಲೋ ಅರಳಿದ ಡ್ಯಾಫೋಢಿಲ್ ಗಳು ಹರೆಯ ಬಿರಿದ ಲಿಲ್ಲಿ ಹೂಗಳು ಘಮವ ಸಾರುತ್ತಿದ್ದವೇನೋ ನನ್ನ ಮೂಗಿ...