ಗಿರಾಕಿ
ಹೂ ಕೊಳ್ಳುವವನ ಕಂಗಳಲಿ
ಇಬ್ಬನಿ ತಬ್ಬಿದ ಘಾಟಿ ರಸ್ತೆಯ ಮಬ್ಬು;
ಕಣ್ಣಂಚಲಿ ಜಿನುಗಿದ ಕಣ್ಣೀರು
ಬೆರಳಂಚನು ಸುಡುವ ಮುನ್ನ
ತಣ್ಣನೆ ಜಾರಿ
ಗುಲಾಬಿಗಳ ಮುತ್ತಿತು;
ನನಗಿದು ಹೊಸತಲ್ಲ,
ಯಾವಾಗಲೂ ಹೂಗಳ ಆರ್ದ್ರಗೊಳಿಸುವವರೇ-
ಕೆಲವೊಮ್ಮೆ ಹೃದಯ ಮಿಡಿದು
ಕೆಲವೊಮ್ಮೆ ಹೃದಯ ಬಿರಿದು;
"ಎಷ್ಟು ಬೇಕಾಗಬಹುದು?"
ಸಾಂತ್ವಾನಿಸುವ ದನಿಯಲ್ಲಿ ಉಸುರಿದೆ
"ಈ ಕಂಗಳು ಸಾಕ್ಷಾತ್ಕರಿಸಿದ ಪ್ರತಿ
ಹಲ್ಲೆಗಳಿಗೂ ಸಾಕಾಗುವಷ್ಟು!" ಉತ್ತರ ಬಂತು,,,
ಹೂಗಳ ಕಂಪಿನ ನಡುವೆಯೂ
ಕಂಪಿಸುವ ಅವನ
ಚಪ್ಪಲಿಗಳಿಗಂಟಿದ ಹೊಲಸು
ನನ್ನ ಮೂಗನ್ನು ತೀವ್ರವಾಗಿ
ಕೊಲ್ಲಲಾರಂಭಿಸಿತು,,.
ಇಬ್ಬನಿ ತಬ್ಬಿದ ಘಾಟಿ ರಸ್ತೆಯ ಮಬ್ಬು;
ಕಣ್ಣಂಚಲಿ ಜಿನುಗಿದ ಕಣ್ಣೀರು
ಬೆರಳಂಚನು ಸುಡುವ ಮುನ್ನ
ತಣ್ಣನೆ ಜಾರಿ
ಗುಲಾಬಿಗಳ ಮುತ್ತಿತು;
ನನಗಿದು ಹೊಸತಲ್ಲ,
ಯಾವಾಗಲೂ ಹೂಗಳ ಆರ್ದ್ರಗೊಳಿಸುವವರೇ-
ಕೆಲವೊಮ್ಮೆ ಹೃದಯ ಮಿಡಿದು
ಕೆಲವೊಮ್ಮೆ ಹೃದಯ ಬಿರಿದು;
"ಎಷ್ಟು ಬೇಕಾಗಬಹುದು?"
ಸಾಂತ್ವಾನಿಸುವ ದನಿಯಲ್ಲಿ ಉಸುರಿದೆ
"ಈ ಕಂಗಳು ಸಾಕ್ಷಾತ್ಕರಿಸಿದ ಪ್ರತಿ
ಹಲ್ಲೆಗಳಿಗೂ ಸಾಕಾಗುವಷ್ಟು!" ಉತ್ತರ ಬಂತು,,,
ಹೂಗಳ ಕಂಪಿನ ನಡುವೆಯೂ
ಕಂಪಿಸುವ ಅವನ
ಚಪ್ಪಲಿಗಳಿಗಂಟಿದ ಹೊಲಸು
ನನ್ನ ಮೂಗನ್ನು ತೀವ್ರವಾಗಿ
ಕೊಲ್ಲಲಾರಂಭಿಸಿತು,,.
ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ
ಕನ್ನಡಕ್ಕೆ :ಜಾನ್ ಸುಂಟಿಕೊಪ್ಪ .
Comments
Post a Comment