*****ಅಪ್ಪಾ*****
ವಾತ್ಸಲ್ಯದ ಕಣಿವೆಯ ತುಂಬಾ
ಕಾನೆಳೆದುಕೊಂಡು ಹುಡುಕುತ್ತಿರುವೆ
ಹತ್ತಿ - ಇಳಿವ ಪಡಿಪಾಟಲು ಕಂಡು
ಕಲ್ಲು ಮುಳ್ಳುಗಳು ನಕ್ಕಿವೆ;
ಕಿತ್ತು ಬಂದ ಹೃದಯ
ತೊಟ್ಟಿಕ್ಕುವ ನೆತ್ತರು
ಹೆಜ್ಜೆಗುರುತುಗಳ ಕೆಂಪಾಗಿಸಿದೆ,.
ದುಃಖದ ಉಮ್ಮಳಿಕೆ ಮಾರ್ದನಿಸಿದೆ
ಕಣಿವೆಯ ಹೆಬ್ಬಂಡೆಗೂ ಕೂಡಾ
ಜಿನುಗುವ ಕಣ್ಣೀರು ,...
ಅಪ್ಪಾ ನೀನೆಲ್ಲಿರುವೆ?!
ನಿನ್ನ ಮಣ್ಣಾಗಿಸಿದ ಮಣ್ಣು
ನಿರ್ಲಿಪ್ತ,.....
ಚಿಗುರಿದ ಹಸುರಿನಲೊಂದು
ಹೂಮೊಗ್ಗ ನಸುನಗು,,,
ಸೊಂಯ್ಯನೆ ಬೀಸುವ ಸುಳಿಗಾಳಿಗೆ
ನಿನ್ನ ಬೊಗಸೆಯಷ್ಟು ಬಿಸುಪು,,,
ಕನಸು-ಮನಸು-ಗಂಟಲು ಬಿಗಿದು
ಎಲ್ಲೆಲ್ಲೂ ಮೌನ,,,,
ಇರಲಿ...
ಹೀಗೇ ಇರಲಿ,
ಅಪ್ಪನೆಂಬ ಅಪ್ಪನ ಪ್ರೀತಿ
ಹೀಗೆಯೇ ಇರಲಿ,,,,
ಇಲ್ಲವಾದರೆ ಒಮ್ಮೆ ನಾನು
ಸತ್ತು ಹೋದೇನು,,.
ನಿನ್ನ ಪ್ರೇಮದ ಸವಿನೆನಪುಗಳ
ಮರೆತು ಬಿಟ್ಟೇನು....
ಮರೆತು ಬಿಟ್ಟೇನು,...
- ಜಾನ್ ಸುಂಟಿಕೊಪ್ಪ.
ಕಾನೆಳೆದುಕೊಂಡು ಹುಡುಕುತ್ತಿರುವೆ
ಹತ್ತಿ - ಇಳಿವ ಪಡಿಪಾಟಲು ಕಂಡು
ಕಲ್ಲು ಮುಳ್ಳುಗಳು ನಕ್ಕಿವೆ;
ಕಿತ್ತು ಬಂದ ಹೃದಯ
ತೊಟ್ಟಿಕ್ಕುವ ನೆತ್ತರು
ಹೆಜ್ಜೆಗುರುತುಗಳ ಕೆಂಪಾಗಿಸಿದೆ,.
ದುಃಖದ ಉಮ್ಮಳಿಕೆ ಮಾರ್ದನಿಸಿದೆ
ಕಣಿವೆಯ ಹೆಬ್ಬಂಡೆಗೂ ಕೂಡಾ
ಜಿನುಗುವ ಕಣ್ಣೀರು ,...
ಅಪ್ಪಾ ನೀನೆಲ್ಲಿರುವೆ?!
ನಿನ್ನ ಮಣ್ಣಾಗಿಸಿದ ಮಣ್ಣು
ನಿರ್ಲಿಪ್ತ,.....
ಚಿಗುರಿದ ಹಸುರಿನಲೊಂದು
ಹೂಮೊಗ್ಗ ನಸುನಗು,,,
ಸೊಂಯ್ಯನೆ ಬೀಸುವ ಸುಳಿಗಾಳಿಗೆ
ನಿನ್ನ ಬೊಗಸೆಯಷ್ಟು ಬಿಸುಪು,,,
ಕನಸು-ಮನಸು-ಗಂಟಲು ಬಿಗಿದು
ಎಲ್ಲೆಲ್ಲೂ ಮೌನ,,,,
ಇರಲಿ...
ಹೀಗೇ ಇರಲಿ,
ಅಪ್ಪನೆಂಬ ಅಪ್ಪನ ಪ್ರೀತಿ
ಹೀಗೆಯೇ ಇರಲಿ,,,,
ಇಲ್ಲವಾದರೆ ಒಮ್ಮೆ ನಾನು
ಸತ್ತು ಹೋದೇನು,,.
ನಿನ್ನ ಪ್ರೇಮದ ಸವಿನೆನಪುಗಳ
ಮರೆತು ಬಿಟ್ಟೇನು....
ಮರೆತು ಬಿಟ್ಟೇನು,...
- ಜಾನ್ ಸುಂಟಿಕೊಪ್ಪ.
Comments
Post a Comment