ಅವ್ವ

ನನ್ನ ಅವ್ವ ಸುಟ್ಟ
ರೊಟ್ಟಿಗಳೆಲ್ಲಾ ಇದೀಗ ನೆತ್ತರಾಗಿದೆ,
ಆ ನೆತ್ತರು ನರನಾಡಿಗಳಲ್ಲೆಲ್ಲಾ ಹರಿದು
ಈ ದೇಹ ಪುಷ್ಪರಾಗ;


ಸೀದು ಹೋದ
ಅವ್ವನ ಕನಸುಗಳೆಲ್ಲಾ
ನನ್ನ ಬದುಕಿನಲಿ ನಳನಳಿಸುತ್ತಿವೆ,
ಆ ಕನಸುಗಳು ನನ್ನ ಬದುಕ ಅರಳಿಸಿ
ಈ ಜೀವನ ಸಂತೃಪ್ತ;


ಸೋತು ಹೋದ ಆ ಸುಕ್ಕುಗಳೆಲ್ಲಾ
ಅವ್ವನ ಬೆವರ ಹನಿಗಳ ನೆನಪುಗಳು,
ಇಂಗಿ ಹೋದ ಕಣ್ಣೀರು
ಮೊಳಕೆಯೊಡೆದು
ಕಣ್ಣ ತುಂಬಾ ಕಾಂತಿ;


ಅವ್ವಾ,,,
ನೀನಿದೋ ಹಣ್ಣೆಲೆಯಾದೆ,
ದೂರದ ಗಾಳಿ ಸಮೀಪಿಸುತ್ತಿದೆ
ನಿನ್ನನ್ನು-ನನ್ನನ್ನೂ;

- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..