ಅದು-ಇದು
ಊರೂರಿಗೆ ತಲೆನೋವಾದ
'ಅದು' ತಿನ್ನುವ ಜನಗಳೇ
ಓಡುವುದ ಕೊಂಚ ನಿಲ್ಲಿಸಿ,
ಉಪ್ಪು-ಖಾರ-ಮಸಾಲೆಯಾಗಲು
ನಾನೂ ಸಿದ್ಧ;
ಊರೂರಿನ ಅಟ್ಟಹಾಸವಾದ
'ಇದು' ತಿನ್ನುವ ಜನಗಳೇ
ಬಾಕು,ಕತ್ತಿ ಲಾಂಗುಗಳ ಚೂಪಾಗಿಸಿ,
ಕೊಚ್ಚಿ ಕೊಚ್ಚಿ ಕೊಯ್ಯಿಸಿಕೊಳ್ಳಲು
ಈ ದೇಹವೂ ಬದ್ದ;
ಊರೂರಿನ ನೆತ್ತರು ಚಪ್ಪರಿಸುವ ಜನಗಳೇ
ಕಾಲೆಳೆದು ಓಡೋ ನೆಮ್ಮದಿಯನ್ನಿಡಿಯಿರಿ
ನೆತ್ತರ ಕಲೆಗೆ ಹೆದರಿ ಬೇಸತ್ತು
ಮಂಗಳ ಗ್ರಹಕ್ಕೇ ನೆಗೆದು ಬಿಟ್ಟೀತು,,,
'ಅದು-ಇದು'ತಿನ್ನಲು
ನಾವು ನೀವೇ ಇಲ್ಲವಾದೀತು....
- ಜಾನ್ ಸುಂಟಿಕೊಪ್ಪ.
'ಅದು' ತಿನ್ನುವ ಜನಗಳೇ
ಓಡುವುದ ಕೊಂಚ ನಿಲ್ಲಿಸಿ,
ಉಪ್ಪು-ಖಾರ-ಮಸಾಲೆಯಾಗಲು
ನಾನೂ ಸಿದ್ಧ;
ಊರೂರಿನ ಅಟ್ಟಹಾಸವಾದ
'ಇದು' ತಿನ್ನುವ ಜನಗಳೇ
ಬಾಕು,ಕತ್ತಿ ಲಾಂಗುಗಳ ಚೂಪಾಗಿಸಿ,
ಕೊಚ್ಚಿ ಕೊಚ್ಚಿ ಕೊಯ್ಯಿಸಿಕೊಳ್ಳಲು
ಈ ದೇಹವೂ ಬದ್ದ;
ಊರೂರಿನ ನೆತ್ತರು ಚಪ್ಪರಿಸುವ ಜನಗಳೇ
ಕಾಲೆಳೆದು ಓಡೋ ನೆಮ್ಮದಿಯನ್ನಿಡಿಯಿರಿ
ನೆತ್ತರ ಕಲೆಗೆ ಹೆದರಿ ಬೇಸತ್ತು
ಮಂಗಳ ಗ್ರಹಕ್ಕೇ ನೆಗೆದು ಬಿಟ್ಟೀತು,,,
'ಅದು-ಇದು'ತಿನ್ನಲು
ನಾವು ನೀವೇ ಇಲ್ಲವಾದೀತು....
- ಜಾನ್ ಸುಂಟಿಕೊಪ್ಪ.
Comments
Post a Comment