***** ಸತ್ಯ *****
ಒಂದು ರಾತ್ರಿ
ಗಲಭೆಯಾದ ಬೀದಿಗಳಲ್ಲಿ
ಭಾರವಾದ ಹೆಜ್ಜೆಯೊಂದಿಗೆ ಗೊಣಗಿದೆ,
'ಯಾವುದು ಸತ್ಯ ? '
ಬೀದಿಯೊಂದು ನರಳಿತು,
'ದೇಶಪ್ರೇಮವೇ ಸತ್ಯ!'
ಸತ್ಯಾಸತ್ಯತೆಯ ಪರಾಮರ್ಶೆಗೂ ಮುನ್ನ
ಗಲ್ಲಿಯೊಂದು ಅರಚಿತು,
'ಧರ್ಮಾಂಧತೆಯೇ ಸತ್ಯ!'
ಬೀದಿಬೀದಿಗಳ ವಾಗ್ವಾದಕ್ಕೆ
ಹೆದರಿ ನಾನು ಓಡಲಾರಂಭಿಸಿದೆ...
ಬಸವಳಿದು ಕಡೆಗೊಮ್ಮೆ ನಿಂತಾಗ
ಕತ್ತಲೆಯ ಕಂಬಳಿ ಹೊದ್ದ
ಆ ಟಾರು ರಸ್ತೆ ಬಿಕ್ಕುತ್ತಾ ಹೇಳಿತು,
'ಸತ್ಯವೆಂದರೆ ಕಾಣದ ಕೈ...!?'
- ಜಾನ್ ಸುಂಟಿಕೊಪ್ಪ.
ಗಲಭೆಯಾದ ಬೀದಿಗಳಲ್ಲಿ
ಭಾರವಾದ ಹೆಜ್ಜೆಯೊಂದಿಗೆ ಗೊಣಗಿದೆ,
'ಯಾವುದು ಸತ್ಯ ? '
ಬೀದಿಯೊಂದು ನರಳಿತು,
'ದೇಶಪ್ರೇಮವೇ ಸತ್ಯ!'
ಸತ್ಯಾಸತ್ಯತೆಯ ಪರಾಮರ್ಶೆಗೂ ಮುನ್ನ
ಗಲ್ಲಿಯೊಂದು ಅರಚಿತು,
'ಧರ್ಮಾಂಧತೆಯೇ ಸತ್ಯ!'
ಬೀದಿಬೀದಿಗಳ ವಾಗ್ವಾದಕ್ಕೆ
ಹೆದರಿ ನಾನು ಓಡಲಾರಂಭಿಸಿದೆ...
ಬಸವಳಿದು ಕಡೆಗೊಮ್ಮೆ ನಿಂತಾಗ
ಕತ್ತಲೆಯ ಕಂಬಳಿ ಹೊದ್ದ
ಆ ಟಾರು ರಸ್ತೆ ಬಿಕ್ಕುತ್ತಾ ಹೇಳಿತು,
'ಸತ್ಯವೆಂದರೆ ಕಾಣದ ಕೈ...!?'
- ಜಾನ್ ಸುಂಟಿಕೊಪ್ಪ.
Comments
Post a Comment