*****ಕನವರಿಕೆ*****

ಗೆಳೆಯಾ,,,

ಕರ್ರ್ರಗಿನ ಶವಸಂಪುಟದಲಿ

ತಣ್ಣನೆ ನೀನು ಮಲಗಿದೆ;

ಉಮ್ಮಳಿಸುವ ದುಃಖವೂ ತಕರಾರಿಲ್ಲದೆ

ಸಂಪುಟದ ಬಾಗಿಲ ಮುಚ್ಚಿತು,

ಚಿಲಕ ಬಡಿಯಿತು,,,

ಮಣ್ಣ ಆಳಕ್ಕೆ

ಸುಮ್ಮಗೆ ಮಲಗಿದೆ ನೀನು

ಮಣ್ಣಲಿ ಮಣ್ಣಾಗಿ,,,

ಆ ಮಣ್ಣ ಕಂಪಲಿ ನಿನ್ನ ತಂಪಿದೆ;

ನಿಜ,, ಆದರೆ,,,

ನೀನಿಲ್ಲದ ಈ ನರಳಿಕೆ

ತಕರಾರು ತುಂಬಿದ ಈ

ಜಗತ್ತೆಂಬ ಶವಸಂಪುಟ

ಕನಸೆಂಬಂತೆ ಬೆತ್ತಲಾಗಿದೆ,,

ನನ್ನ ದಿರಿಸು-ತೊಗಲುಗಳ

ಒಳಹೊರಗೆಲ್ಲಾ ಸತ್ತ ವಾಸನೆಯಿದೆ.,.


ಗೆಳೆಯಾ,,,

ಇನ್ನೆಷ್ಟು ದಿನ ಕಾಲ ಕಾಯಲಿ-

ಮಣ್ಣಾಗಲು- ಕಂಪಾಗಲು-ತಂಪಾಗಲು

- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..