ಹೂ ಅರಳುವ ಸಮಯ
ಈ
ಕೊಸರಾಟಗಳೆಲ್ಲಾ
ನಿಟ್ಟುಸಿರಾಗಿ
ಬದಲಾಗುವುದರಲ್ಲಿ ಅರ್ಥವಿಲ್ಲ;
ಅರ್ಥವಿರುವುದು
ಅವಳ ಕಣ್ಣ ಶೂನ್ಯತೆಯಲಿ,
ಗೋಡೆಗೋಡೆಗಳಲಿ
ಪ್ರತಿಧ್ವನಿಸುವ ಅಹಮ್ಮಿನಲಿ;
ನನಗೂ ಆಸೆಯಿದೆ
ಉಸಿರಾಡಲು,
ಚೆಲುವಿನ ಹೂವಿನ
ಅರಳುವಿಕೆಗಾಗಿ ಕಾಯಲು;
ಸತ್ತು ಹೋದ
ಪ್ರೀತಿಯ ಮುಂದೆ
ಬೋರಲು ಬಿದ್ದು ಗೋಳಾಡಬೇಡ,...
ಓ ದೇವಾ,
ನಿನ್ನದೇ ದಯೆ...
ಕಿಟಕಿ ಬಾಗಿಲುಗಳ ತೆರೆದು ಕಾಯುತಿರುವೆ,
ನನಗೀಗ ಗೋಡೆಗಳ ಕೆಡವಬೇಕಿದೆ
ಬೆಳೆದು ನಿಂತ ಅಹಮ್ಮಿನ ದೈತ್ಯ
ಕಿಟಕಿ ಬಾಗಿಲುಗಳಿಂದ ಹೊರಹೋಗಲಾರ.
- ಜಾನ್ ಸುಂಟಿಕೊಪ್ಪ . ಕೊಡಗು.
Comments
Post a Comment