ಒಂದು ಪ್ರಾರ್ಥನೆ
ಗಡಿ ಗಡಿಗಳ
ದಾಟಿ ಬಂದಿದೆ
ಪ್ರೇಮ;
ಅಕ್ಷರವಾಗಿ,
ದನಿಯಾಗಿ,
ಕಡೆಗೆ -
ಕಾಮವೂ ಆಗಿ;
2ಜಿ 3ಜಿ ಗಳ ನೆಟ್ವರ್ಕಿಗಿಲ್ಲ
ಹಾಳಾದ ಗಡಿಗಳ ಹ಼ಂಗು ..,
ಆಳವರಿಯದ ಭಾವನೆಗಳು
ಸದ್ದಿಲ್ಲದೆ ಮೊಳಕೆಯೊಡೆದಿವೆ;
ಬಿಟ್ಟ ಬೇರು ಆಳಕ್ಕಿಳಿದಂತೆ
ಹೃದಯವೂ ಬಿರುಕು ಬಿಡುತಿದೆ.,
ಹೊರಗಿಣುಕುವ ಹಸುರು ಚಿಗುರಲು
ತೇಪೆ ಹಚ್ಚುತಿದೆ ಕ್ರೌರ್ಯ ,...
ನಡೆ ಮುಂದೆ ನಡೆ ಮುಂದೆ
ಹೆಗಲೇರಲಿ ಶವಸಂಪುಟ ,.
ಉಸಿರು ಮರೆತ ನಾಗರಿಕತೆ-
ಕೊಳೆವ ಮುನ್ನ ಹೆಜ್ಜೆ ಗಳನಿರಿಸಿ
ಹೆಜ್ಜೆಯ ಮೇಲೆ
ಗಡಿಗಡಿಗಳೂ ನಡೆದು ಬಿಡಲಿ,
ಶವಸಂಪುಟದ ಗರ್ಭ -
ನವಕೂಸೊಂದನು ಹಡೆಯಲಿ;
ಬೆಳಕು ಮಳೆಯಾಗಿ
ಕಾಮ ಪ್ರೇಮವಾಗಿ
ಆಗಸದುದ್ದಕ್ಕೂ ಸದ್ದಿಲ್ಲದೆ ಮಿನುಗಲಿ ,,.
- ಜಾನ್ ಸುಂಟಿಕೊಪ್ಪ, ಕೊಡಗು.
Comments
Post a Comment