ಎರಡು ಕವಿತೆಗಳು

**** 1 ****

ವೇಗವಾಗಿ

ತಿರುಗುವ

ಫ್ಯಾನಿಗೆ

ಇನ್ನೂ

ನನ್ನ

ಕಾಮದ

ಬಿಸಿಯನ್ನು

ಆರಿಸಲಾಗುತ್ತಿಲ್ಲ.,,


ಬಿಸಿ ಬೆಳೆದು

ದೈತ್ಯನಾಗಿ

ಗೋಡೆಗೋಡೆಗಳಿಗೆ

ಅಪ್ಪಳಿಸಿದಂತಾಗಿ -

ನಾನು

ಮಗ್ಗುಲ

ಬದಲಿಸಿ ಮಲಗಿದೆ,

ಬೀದಿಯುದ್ದಕ್ಕೂ

ನಾಯಿ ಬೊಗಳಿದ ಸದ್ದು....


****** 2 *****

ಅಲ್ಲಾ...

ಕ್ಷಣಿಕ ಬದುಕಿನಲೂ

ಕಾಮದ ವಾಸನೆಯೇಕೆ ?!

ಸುಡುಗಾಡಿನಲಿ ಬೆಳೆದ

ಗಿಡದ ತುಂಬಾ ಹೂ ಹರಡಿವೆ ,..

ಪಕ್ಕದ ಮರದಲ್ಲೆಲ್ಲೋ

ಹಕ್ಕಿಗಳ ಕಾಮಕೇಳಿ ನಡೆದಿದೆ,..

ನನಗೂ ಏನೋ ಹೊಳೆದಂತಾಗಿ

ಮಣ್ಣ ಹೊದ್ದು

ದಿಬ್ಬವಾಗಿ

ಸುಮ್ಮಗೆ ಮಲಗಿದೆ -



ಯಾರೋ ಪುಣ್ಯಾತ್ಮರು

ನೆತ್ತಿಯ ಮೇಲೆ

ಶಿಲುಬೆ ನೆಟ್ಟರು...

        - ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..