ತಲೆದಿಂಬು

ತಲೆದಿಂಬು

ಕೈ ಬೀಸಿ ಕರೆಯುತ್ತಿದೆ,

ಒಂದು ಹಿಡಿ ಸಾಂತ್ವಾನವಾಗಿ...


ಕಟ್ಟೆಯೊಡೆದ ದುಃಖ

ಧುಮ್ಮಿಕ್ಕುವುದು ತಲೆದಿಂಬಿನಲ್ಲೇ

ಬೆಳಗಾದಾಗ ಕಣ್ಣು ಕೆಂಪಗಾಗುವುದಷ್ಟೇ;


ಕಾಮವಿಲ್ಲದ ಪ್ರೇಮ-

ಪ್ರೇಮವಿಲ್ಲದ ಕಾಮ

ತಲೆದಿಂಬಿನ ಉಬ್ಬರವಿಳಿತಗಳು;

ಎಂದೂ ಬಾರದ ಅಪ್ಪ

ಬರೆಯಲಾಗದ ಕವಿತೆ

ಬೆಚ್ಚಗೆ ತಬ್ಬಿಕೊಳ್ಳುವುದು

ಸವಿಮಾತಾಗಿ;


ಹುಟ್ಟು- ಸಾವಿನ

ಚೆಕ್ ಪೋಸ್ಟಿನ ಆಸುಪಾಸಿನಲೆಲ್ಲಾ

ಸುಳಿದಾಡಲು ತಲೆದಿಂಬೇ ರಹದಾರಿ;

ದಿಂಬಿನ ಮೆದುವಿನಲ್ಲೇನಿದೆ ಸೊಗಸು

ಹಗಲು-ರಾತ್ರಿಯ ಕೊಯ್ದಾಟವಿರುವಾಗ

ತುಣುಕು ನಿದ್ದೆಯ ಹಂಗಿರುವಾಗ,..


ನಾನೂ ಕಾಯುತಿರುವೆ

ಈಗೀಗ-

ಹುಡಿಮಣ್ಣ ತಲೆದಿಂಬಾಗಿಸಲು

ಎಂದೂ ಕಾಣದ ಕನಸ

ನನಸಾಗಿಸಲು..

           - ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..