ದೇಶಾಂತರ

ಎಡಿನ್ಬರ್ಗಿನ

ಶೀತಮಾರುತವೊಂದು

ಮಲೆನಾಡಿಗೇರಿದೆ;

ಕಣ್ಣು ಹಾಯಿಸಿದಷ್ಟೂ

ಕಡಲ ತಡಿಯ ಹಚ್ಚ ಹಸುರು,

ಹೆಜ್ಜೆ ಇರಿಸಿದಷ್ಟೂ

ಮತ್ತದೇ ಒದ್ದೆ ಮರಳು;

ಮಿನುಗುವ ಕಡಲ ನೀರು ನೀನು

ನೀಲಿಯೋ ?! ಹಸುರೋ ?!

ನನಗಾಷ್ಚರ್ಯ,..

ನನ್ನ ತೊಗಲೀಗ ಬೆಳ್ಳಗಾಗಿದೆ ,

ದೊಗಳೆ ಅಂಗಿಯ ಒಳಹೊರಗೆಲ್ಲಾ

ಅದೇ ವೀರ್ಯದ ಅಮಲು ;

ಶಿರಾಡಿ ಘಾಟಿಯ ತಿರುವುಗಳಲೆಲ್ಲಾ

ಹರಿವ ಟ್ವೀಡ್ ಥೇಮ್ಸಿನ ಚೆಲುವು,

ಬಂಡೆ ಬಂಡೆಗಳೆಡೆಯಲ್ಲೂ

ನಡೆವ ಮುಕ್ತ ಮೈಥುನ .,

ಅಗೋ ಅಲ್ಲಿ ಹಾಡುತ್ತಿದೆ

ಕುಡಿಯರ ಮುಗ್ಧ ಗುಡಿಸಲು -

ಜಾಸ್ ಗಿಟಾರಿನ ಗುನುಗುವಿಕೆಗೆ

ಸದ್ದಿಲ್ಲದೆ ನಿಮಿರುತ್ತಿದೆ;

ರೆಕ್ಕೆ ಬಡಿದು ಕೂಗು ಹಾಕುವ

ಹೂಂಜಕ್ಕೂ ಇದೆ

ಅಂತರಾಷ್ಟ್ರೀಯ ಕಾಲಮಾನದ ಸಂಶಯ,..

ಹರಿದ ಚಾದರದೊಳಗಿನ

ಆ ಬಿಸುಪು ಕನಸುಗಳು

ನನ್ನತನವನ್ನು ಮುಟ್ಟಿಮುಟ್ಟಿ ನೋಡುತ್ತಿವೆ..

ಎದೆಯೊಳಗಿನ ದಾಹಕ್ಕೆ

ಅಟ್ಲಾಂಟಿಕ್ ನ ಅಲೆಗಳನ್ನು ಬರಿದಾಗಿಸುತ್ತೇನೆ..

ಆಗಸದಲಿ ಹೊಳೆವ ಚಂದ್ರ

ನಕ್ಕು ಸುಮ್ಮಗಾಗುತ್ತಾನೆ .,.

                 - ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..