ಸಂಘರ್ಷ

ಸಂಘರ್ಷ






1

ಇಗರ್ಜಿಯ ಹೊಸ್ತಿಲ ಬಳಿ

ಚಪ್ಪಲಿಗಳೆರಡು ಏದುಸಿರು ಬಿಡುತ್ತಿವೆ;

ಗದ್ದೆ ದಾಟಿ ಏರಿ ಮೀರಿ

ಗುಡ್ಡ ಹತ್ತಿ ಮಣ್ಣು ಮೆತ್ತಿಕೊಂಡ

ಚಪ್ಪಲಿಗಳು ತಮ್ಮ ಪಾಪಗಳಿಗಾಗಿ

ಬಿಕ್ಕಿ ಬಿಕ್ಕಿ ಅಳುತ್ತಿವೆ-

ಇಗರ್ಜಿಯ ಮೊದಲ ಘಂಟೆ

ಇನ್ನು ಸದ್ದುಗೈಯ್ಯಬೇಕಷ್ಟೇ.,,.

2

ರೊಂಯ್ಯನೆ ಬಂದ ಕಾರಿಗೆ

ಎದ್ದ ಧೂಳು

ಆ ಪಾದರಿಯ

ಪ್ರಭೋದನೆಯ ಮಂತ್ರಮುಗ್ಧತೆಗೇ

ಮಂಕು ಬಡಿಸುತ್ತದೆ,

ಬೆಳ್ಳಗಿನ ಕಾರಿನಿಂದಿಳಿದ

ಕರಿ ಬೂಟುಗಳು

ಮಣ್ಣು ಮೆತ್ತಿದ ಚಪ್ಪಲಿಗಳ

ಎದೆಯ ಮೆಟ್ಟಿ ವಿರಮಿಸುತ್ತವೆ;

3

“ಮೊದಲಿಗರೆಲ್ಲಾ ಕಡೆಯವರಾಗುವರು

ಕಟ್ಟಕಡೆಯವರೂ ಮೊದಲಿಗರಾಗುವರು”

ಪಾದರಿ ಉಲಿದ ಏಸುವಿನ ಮಾತು

ಮಣ್ಣು ಮೆತ್ತಿದ ಚಪ್ಪಲಿಗಳ

ಕತ್ತ ಹಿಸುಕಿ ಕಂಗಾಲಾಗಿಸುವುದು..,

ಆ ನರಳುವಿಕೆಯಿಂದ ಅರಳಿದ

ಕರ್ರ್ರಗಿನ ಬೂಟುಗಳು

ಮಿರಮಿರ ಮಿಂಚುವವು…

ಕೊಂಕಣಿ ಮೂಲ: ಆಂಡ್ರ್ಯೂ ಎಲ್ ಡಿಕುನ್ನ

ಅನುವಾದ: ಜಾನ್ ಸುಂಟಿಕೊಪ್ಪ.

Comments

Post a Comment

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..