ನೇಣು ಕುಣಿಕೆ
ಆ
ನೇಣು ಕುಣಿಕೆ
ಇನ್ನೂ ಹಾಗೆಯೇ ಇದೆ,.,
ತಿರುಗುವ ಫ್ಯಾನಿಗೆ
ಒಂದು ಪೂರ್ಣ ವಿರಾಮವಿಟ್ಟಂತೆ.,,
ಅವರು
ಅವಳನ್ನು ಹೊತ್ತು ಹೋಗಿದ್ದಾರೆ
ಮತ್ತು
ನಾನು ಅವಳೊಂದಿಗೆ ಲೀನವಾಗಿದ್ದೇನೆ ...
ಎಡವಿ ಬಿದ್ದ ಕುರ್ಚಿ
ಜೋತುಬಿದ್ದ ಹಗ್ಗ
ಮತ್ತು
ಆ ಕೋಣೆಯ ನೀರವತೆ
ನನ್ನ ಲೀನವಾಗಿಸಿದೆ .,.
ನಾನು ಲೀನವಾಗಿದ್ದೇನೆ ,,.
ಕೋಣೆಯೊಳಗೆ
ಇಣುಕುವ ಅವರ ಗುಂಡಿಗೆ
ಢವಗುಟ್ಟುತ್ತಿದೆ
ಜತೆಗೆ
ಕಣ್ಣಂಚಲಿ ನೀರು
ಇದ್ದಾಗ ಇಲ್ಲದವರು
ಇಲ್ಲವಾದಾಗ ತಡವರಿಸುತ್ತಾರೆ ,,,
ನನ್ನಂತೆ ,,,
ಆ
ನೇಣು ಕುಣಿಕೆ
ಇನ್ನೂ ಹಾಗೆಯೇ ಇದೆ
ಇರಲಿ ಬಿಡಿ
ಪದೇಪದೇ
ನನಗೂ ಕೊರಳೊಡ್ಡಬೇಕಿದೆ ,,.
ಇದ್ದಾಗ ಇಲ್ಲದವರು ಇಲ್ಲವಾದಾಗ ತಡವರಿಸುತ್ತಾರೆ.. ವಾಹ್.
ReplyDeleteಇದ್ದಾಗ ಇಲ್ಲದವರು ಇಲ್ಲವಾದಾಗ ತಡವರಿಸುತ್ತಾರೆ.. ವಾಹ್.
ReplyDelete